ಗೃಹಲಕ್ಷ್ಮೀ ಯೋಜನೆಯಲ್ಲಿ ಬದಲಾವಣೆ: ಗ್ಯಾರಂಟಿಗಳ ನಿಜಸ್ವರೂಜ ಬಯಲು ಎಂದ ನಿಖಿಲ್ ಕುಮಾರ್

Political News: ಗೃಹಲಕ್ಷ್ಮೀ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ತರಲು ಡಿಕೆಶಿ ಸರ್ಕಾರ ನಿರ್ಧರಿಸಿದ್ದು, ಯಾರ್ಯಾರು ನಿಧನರಾಗಿಯೂ, ಅವರ ಮನೆಯವರು ಗೃಹಲಕ್ಷ್ಮೀ ಹಣ ಪಡೆಯುತ್ತಿದ್ದಾರೋ, ಯಾರು ತೆರಿಗೆ ಸಂದಾಯ ಮಾಡಿಯೂ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಾಗಿದ್ದಾರೋ, ಅಂಥವರಿಗೆ ಗೃಹಲಕ್ಷ್ಮೀ ಯೋಜನೆ ರದ್ದು ಮಾಡಲಾಗುತ್ತಿದೆ.

ಈ ಕಾರಣಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.  ಚುನಾವಣೆಗೆ ಮುನ್ನ ಕಾಂಗ್ರೆಸ್ ಕೊಟ್ಟಿದ್ದ “ಗ್ಯಾರಂಟಿ”ಗಳ ನಿಜಸ್ವರೂಪ ಈಗ ಒಂದೊಂದಾಗಿ ಹೊರಬರುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಹೆಸರಿನಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಯೋಜನೆಯಿಂದ ಹೊರಗಿಡುವ ಪ್ರಕ್ರಿಯೆ ಆರಂಭಿಸಿರುವುದು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ನಿಖಿಲ್ ಹೇಳಿದ್ದಾರೆ.

ಮತಗಳಿಗಾಗಿ “ಗ್ಯಾರಂಟಿ” ಎಂದು ಘೋಷಿಸಿದ್ದ ಯೋಜನೆಗಳ ಭವಿಷ್ಯವೇ ಈಗ ಪ್ರಶ್ನಾರ್ಥಕವಾಗಿದೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ “ಗ್ಯಾರಂಟಿ” ಇಲ್ಲ ಎಂಬ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ. ಇಂದು 1.1 ಲಕ್ಷ ಮಹಿಳೆಯರ ಸರದಿ. ನಾಳೆ ಉಳಿದ ನಾಲ್ಕು ಗ್ಯಾರಂಟಿಗಳ ಸ್ಥಿತಿ ಏನು? ಕರ್ನಾಟಕದ ಜನರು ಈ ಪ್ರಶ್ನೆಗೆ ಉತ್ತರ ಕೇಳುತ್ತಿದ್ದಾರೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

About The Author