Health Tips: ನೆನೆಸಿದ ಕಡಲೆಕಾಳಿನಿಂದ ನಾವೆಲ್ಲ ಹಲವು ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಪಲ್ಯ, ಸಾರು, ಪಲಾವ್, ಉಸ್ಲಿ, ಚನಾ ಮಸಾಲಾ, ಇತ್ಯಾದಿ ರುಚಿ ರುಚಿ ಆಹಾರ ತಯಾರಿಸಲಾಗತ್ತೆ. ಆದರೆ ಇದನ್ನು ನೆನೆಸಿ ಬೆಳಿಗ್ಗೆ ತಿಂಡಿಗೂ ಮುನ್ನ ಸೇವಿಸಿದರೆ, ನಮ್ಮ ದೇಹಕ್ಕೆ ಅತ್ಯುತ್ತಮ ಲಾಭ ಸಿಗಲಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಶುಗರ್ ರೋಗಿಗಳಿಗೆ ಅತ್ಯದ್ಭುತ ಆಹಾರವಿದು: ರಾತ್ರಿಯಿಡೀ 8ರಿಂದ 10 ಗಂಟೆಗಳ ಕಾಲ ಕಪ್ಪು ಕಡಲೆಯನ್ನು ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಏನೂ ಸೇವಿಸದೇ, ಬರೀ ನೀರು ಕುಡಿದು, ಬಳಿಕ ಈ ಕಡಲೆ ಸೇವನೆ ಮಾಡಬೇಕು. ಪ್ರತಿದಿನ ನೀವು 30ರಿಂದ 50 ಗ್ರಾಮ್ ಕಡಲೆ ಸೇವಿಸಬಹುದು. ಶುಗರ್ ರೋಗಿಗಳು ಇದನ್ನು ಸೇವಿಸಿದ್ದಲ್ಲಿ, ಆರೋಗ್ಯದಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಶುಗರ್ ನಿಯಂತ್ರಣದಲ್ಲಿರುತ್ತದೆ.
ಶಕ್ತಿಯುತ ಆಹಾರ: ನೀವು ನೆನೆಸಿದ ಕಡಲೆಯ ಸಲಾಡ್ ಮಾಡಿ ಕೂಡ ಬೆಳಿಗ್ಗೆ ಸೇವಿಸಬಹುದು. ಅದಕ್ಕೆ ತರಕಾರಿ, ಜೇನು, ಉಪ್ಪು ಇತ್ಯಾದಿ ಹಾಾಕಿ ಸಲಾಡ್ ಮಾಡಿ ಸೇವಿಸಬಹುದು. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ನಿಶ್ಶಕ್ತಿಯಿಂದ ಬಳಲುವವರಿಗೆ ಈ ಆಹಾರ ಅತೀ ಉತ್ತಮವಾಗಿದೆ.
ಮೂಳೆ ಬಲವಾಗಿಸುತ್ತದೆ: ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆ ಇದ್ದಲ್ಲಿ, ಮೂಳೆ ಬಲ ಹೆಚ್ಚಿಸಬೇಕು ಎಂದಲ್ಲಿ ನೀವು ಪ್ರತಿದಿನ ಬೆಳಿಗ್ಗೆ, ನೆನೆಸಿದ ಕಪ್ಪು ಕಡಲೆ ಸೇವಿಸಬೇಕು.
ರಕ್ತ ಹೆಚ್ಚಿಸುವ ಆಹಾರ: ನೆನೆಸಿದ ಕಪ್ಪು ಕಡಲೆ ಸೇವಿಸಿದ್ದಲ್ಲಿ, ದೇಹದಲ್ಲಿ ಕಬ್ಬಿಣಾಂಶ ಹೆಚ್ಚುತ್ತದೆ. ಇದರಿಂದ ದೇಹದಲ್ಲಿ ರಕ್ತ ಕೂಡ ಹೆಚ್ಚಾಗುತ್ತದೆ. ಹಸಿವನ್ನು ಕಡಿಮೆ ಮಾಡುವ ಗುಣ ಈ ಕಪ್ಪು ಕಡಲೆಯಲ್ಲಿದೆ.
ಜೀರ್ಣ ಶಕ್ತಿ ಚೆನ್ನಾಗಿರುತ್ತದೆ: ಇನ್ನು ಕಪ್ಪು ಕಡಲೆ ನೆನೆಸಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಮಲ ವಿಸರ್ಜನೆ ಸಮಸ್ಯೆ ಕೂಡ ಇರುವುದಿಲ್ಲ. ಆದರೆ ನೆನಪಿರಲಿ, ನೆನೆಸಿದ ಕಡಲೆ ಸೇವಿಸುವ ಮುನ್ನ ನೀವು ನೀರು ಕುಡಿಯಬೇಕು. ಆದರೆ ಕಡಲೆ ತಿಂದು ನೀರು ಕುಡಿಯಬಾರದು.




