Recipe: ಮಖಾನಾ ಲಡ್ಡು ರೆಸಿಪಿ ಮತ್ತು ಅದರ ಸೇವನೆಯಿಂದಾಗುವ ಲಾಭಗಳು

Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, ಬಾದಾಮಿ, ಗೇರುಬೀಜ, ತುರಿದ ಡ್ರೈಕೋಕೋನಟ್, ಹುರಿದ ಶೇಂಗಾ, ಬೆಲ್ಲ, ತುಪ್ಪ.

ಮಾಡುವ ವಿಧಾನ: ತುಪ್ಪದಲ್ಲಿ ಹುರಿದ ಮಖಾನಾ, ಬಾದಾಮಿ, ಗೇರುಬೀಜ, ಡ್ರೈಕೋಕೋನಟ್, ಹಾಗೆ ಹುರಿದ ಶೇಂಗಾವನ್ನು ತರಿ ತರಿಯಾಗಿ ಪುಡಿ ಮಾಡಿ. ಬೆಲ್ಲವನ್ನು ಪಾಕ ಬರಿಸಿ, ಮಿಶ್ರಣ ಸೇರಿಸಿ. ಬಳಿಕ ಈ ಮಿಶ್ರಣ ಸ್ವಲ್ಪ ತಣಿದಾಗ, ಲಡ್ಡು ಮಾಡಿ.

ಮಖಾನಾ ಎಂದರೆ ತಾಾವರೆ ಬೀಜ. ಇದರಿಂದ ತಯಾರಿಸಿದ ಲಡ್ಡುವನ್ನು ಪ್ರತಿದಿನ ಬೆಳಿಗ್ಗೆ 1 ಸೇವಿಸಿದರೂ ನಿಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ.

ಮೂಳೆ ಬಲವಾಗುತ್ತದೆ. ನಿಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಇದರಿಂದ ಕ್ಯಾಲ್ಶಿಯಂ ಅಂಶ ಹೆಚ್ಚಾಗಿರುವುದರಿಂದ, ಇದು ದೇಹದಲ್ಲಿ ಕಬ್ಬಿಣಾಂಶ ಹೆಚ್ಚು ಮಾಡಿ, ಶಕ್ತಿಯುತರಾಗಲು ಸಹಾಯ ಮಾಡುತ್ತದೆ.

About The Author