Health Tips: ನಾವು ಪ್ರತಿದಿನ ಸರಿಯಾಗಿ ಬ್ರಶ್ ಮಾಡದಿದ್ದಾಗ, ನಮ್ಮ ಬಾಯಿಯಿಂದ ದುರ್ನಾತ ಬರುತ್ತದೆ. ಅಥವಾ ನೀರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಸೇರಿ ಕೆಲವು ತರಕಾರಿ ಸೇವನೆ ಮಾಡಿದಾಗ, ಬಾಯಿಯಿಂದ ವಾಸನೆ ಬರುತ್ತದೆ. ಇಲ್ಲವಾದಲ್ಲಿ ನಾವು ಆಹಾರ ಸೇವಿಸದಿದ್ದಾಗ, ನಮ್ಮ ಬಾಯಿಯಿಂದ ವಾಸನೆ ಬರುತ್ತದೆ.
ಹಾಗಾಗಿ ನಾವು ಪ್ರತಿದಿನ ಸರಿಯಾಗಿ ಬ್ರಶ್ ಮಾಡಬೇಕು. ಇಂಥ ತರಕಾರಿ ಸೇವಿಸಿದ ಬಳಿಕ ಬಾಯಿ ಸರಿಯಾಗಿ ಕ್ಲೀನ್ ಮಾಡಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ಇದೆಲ್ಲ ಮಾಡಿದರೂ ನಿಮ್ಮ ಬಾಯಿಯಿಂದ ದುರ್ನಾತ ಬರುತ್ತಿದ್ದಲ್ಲಿ ಏನು ಮಾಡಬೇಕೆಂದು ತಿಳಿಯೋಣ ಬನ್ನಿ.
ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಮತ್ತು ಪ್ಯೂರ್ ತೆಂಗಿನ ಎಣ್ಣೆ ಹಾಕಿ ಮಿಕ್ಸ್ ಮಾಡಿ, ಇದರಿಂದ ತುಂಬ ವೇಳೆ ಬಾಯಿ ಮುಕ್ಕಳಿಸಬೇಕು. ಆದರೆ ಇದನ್ನು ಕುಡಿಯಬಾರದು. ಬಾಯಿ ಮುಕ್ಕಳಿಸಿ, ಉಗಿಯಬೇಕು. ವಾರಕ್ಕೆ 3 ಬಾರಿಯಾದರೂ ನೀವು ಹೀಗೆ ಮಾಡಿದರೆ, ನಿಮ್ಮ ಬಾಯಿ- ಹಲ್ಲು ಎಲ್ಲವೂ ಆರೋಗ್ಯವಾಗಿರುತ್ತದೆ.
ಇದನ್ನು ಗಾರ್ಗ್ಲಿಂಗ್ ಎನ್ನುತ್ತಾರೆ. ಕೆಲವರು ಬರೀ ತೆಂಗಿನ ಎಣ್ಣೆಯನ್ನೇ ಬಾಯಿಗೆ ಹಾಕಿ, ಬಾಯಿ ಮುಕ್ಕಳಿಸುತ್ತಾರೆ. ಆದರೆ ಅದರ ನಿಯಮ ತಿಳಿದಿದ್ದರೆ ಮಾತ್ರ ಹಾಗೆ ಮಾಡಬೇಕು. ವೈದ್ಯರ ಸಲಹೆ ಪಡೆದು 6 ತಿಂಗಳಿಗೆ 1 ಬಾರಿ, ಅಂದರೆ ವರ್ಷಕ್ಕೆ 2 ಬಾರಿ ಜಂತಿನ ಗುಳಿಗೆ ಸೇವಿಸಿ.




