Viral News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಪೆನ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಟಿಕ್ಟಾಕ್ ಪೆನ್ ಇದಾಗಿದ್ದು, ಇದನ್ನು ಬಳಸಿದವರಿಗೆ ಬೆರಳು ಹೋಗಿದ್ದು, ಚರ್ಮ ಕಿತ್ತಿು ರಕ್ತ ಬಂದಿದ್ದು, ಹೀಗೆ ಅನೇಕ ಸಮಸ್ಯೆಗಳಾಗಿದೆ ಎಂದು ತಿಳಿದು ಬಂದಿದೆ.
ಈ ಮಾಹಿತಿ ಪ್ರಕಾರ, ಇದು ಗ್ರೆನೈಡ್ ತುಂಬಿಸಿದ ಪೆನ್ ಆಗಿದ್ದು, ಇದನ್ನು ಬಳಸಿದಾಗ ಇದು ಬ್ಲಾಸ್ಟ್ ಆಗುತ್ತಿದ್ದು, ಜನರ ಬೆರಳು, ಕಣ್ಣು ಹೀಗೆ ಹಲವು ಅಂಗಗಳಿಗೆ ಗಂಭೀರ ಗಾಯವಾಗಿದೆ. ಅವರ ಮುಖ ವಿಕಾರವಾಗಿದೆ ಎಂದು ಸುದ್ದಿ ಹರಡಿದೆ.
ಆದರೆ ಇದು ಸತ್ಯವೋ, ಸುಳ್ಳೋ ಎಂದು ಯಾರಿಗೂ ತಿಳಿದಿಲ್ಲ. ಆದರೆ ನಾವು ಮಕ್ಕಳಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು ತುಂಬಾ ಮುಖ್ಯವಾಗಿದೆ. ನಮ್ಮ ಮಕ್ಕಳು ಜೋಪಾನವಾಗಿ, ಆರಾಮವಾಗಿ ಇರಬೇಕು ಅಂದ್ರೆ, ರಸ್ತೆಯಲ್ಲಿ ಸಿಕ್ಕ ವಸ್ತುವಾಗಲಿ, ಅಪರಿಚಿತರು ವಸ್ತುವನ್ನಾಗಲಿ ಮುಟ್ಟಬಾರದು ಎಂದು ತಿಳಿಸಿ ಹೇಳಿ.
ಇದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ. ಆದರೆ ಇಂಥ ಚಿಕ್ಕ ಚಿಕ್ಕ ವಿಷಯಗಳನ್ನು ನಾವು ನಿರ್ಲಕ್ಷಿಸುವುದರಿಂದಲೇ ನಮ್ಮ ಮತ್ತು ನಮ್ಮವರ ಜೀವಕ್ಕೆ ಕುತ್ತು ಬರಲು ಕಾರಣವಾಗಿದೆ. ಹಾಗಾಗಿ ಇಂಥ ವಿಚಾರಗಳಲ್ಲಿ ನಿರ್ಲಕ್ಷ್ಯ ತೋರದೇ, ಎಚ್ಚರಿಕೆ ವಹಿಸುವುದು ಅತ್ಯಗತ್ಯ.




