Life Lesson: ಗೌರವ ಅನ್ನೋದು ಮನುಷ್ಯನ ಜೀವನದ ಬಹುಮುಖ್ಯ ವಿಷಯ. ಮನುಷ್ಯ ದುಡಿಯುವುದೇ, ಜೀವಿಸುವುದೇ ಗೌರವಕ್ಕಾಗಿ. ಆದರೆ ಗೌರವ ನೀಡಿ ಎಂದು ಕೇಳದೇ, ನಾವು ಗೌರವ ಪಡೆಯುವುದು ಹೇಗೆ ಅಂತಾ ತಿಳಿಯೋಣ ಬನ್ನಿ.
ಹೊಗಳಿಕೆಗಾಗಿ ಕೆಲಸ ಮಾಡಬೇಡಿ: ಯಾರಾದರೂ ನಮ್ಮನ್ನು ಹೊಗಳಬೇಕು, ನಮ್ಮ ಬಗ್ಗೆ ಇತರರ ಬಳಿ ಅತೀ ಉತ್ತಮವಾಗಿಯೇ ಮಾತನಾಡಬೇಕು ಎನ್ನುವ ಕಾರಣಕ್ಕೆ ನೀವು ಯಾವ ಕೆಲಸವನ್ನೂ ಮಾಡಕೂಡದು. ಕೆಲವರಿಗೆ ಈ ರೀತಿಯ ಗುಣವಿರುತ್ತದೆ. ಆಫೀಸು ಕೆಲಸ, ಪೂಜೆ, ಮನೆ ನಿರ್ಮಾಣ, ಮದುವೆ ಮಾಡುವುದು ಇತ್ಯಾದಿ ಕೆಲಸಗಳನ್ನು, ಇತರರು ಹೊಗಳಿ ಎನ್ನುವ ಕಾರಣಕ್ಕೆ ಭರ್ಜರಿಯಾಗಿ ಮಾಡಲು ಹೋಗುತ್ತಾರೆ.
ಆದರೆ ನಿಮಗೆ ಗೌರವ ಬೇಕು ಎಂದರೆ, ನೀವು ಇತರರು ಹೊಗಳಲಿ ಎಂದು ಕೆಲಸ ಮಾಡುವುದನ್ನು ಬಿಡಿ. ಬದಲಾಗಿ, ನಿಮ್ಮ ಮನಸ್ಸಿನ ನೀವು ಮಾಡಿರುವ ಕೆಲಸ ಸರಿ ಎನ್ನಿಸಬೇಕು. ಆ ಕೆಲಸದಿಂದ ನಿಮಗೆ ನಮ್ಮದಿ ಸಿಗಬೇಕು. ಅಂಥ ಕೆಲಸ ಸಮಾಜಕ್ಕೆ ಲಾಭ ತರುವಂತಿರಬೇಕು. ಆಗ ಮಾತ್ರ ನಿಮಗೆ ಗೌರವ ಸಿಗಲು ಸಾಧ್ಯ.
ನಿಮ್ಮನ್ನು ನೀವು ಗೌರವಿಸಿ, ಆಗ ಇತರರೂ ನಿಮ್ಮನ್ನು ಗೌರವಿಸುತ್ತಾರೆ: ನಿಮ್ಮನ್ನು ನೀವು ಗೌರವಿಸಿದಾಗ ಮಾತ್ರ, ಇತರರು ನಿಮ್ಮನ್ನು ಗೌರವಿಸುತ್ತಾರೆ. ಬೇರೆಯವರ ಬಳಿ ಮಾನಾಡುವಾಗ, ನಿಮ್ಮನ್ನು ನೀವು ಎಂದಿಗೂ ಕೀಳಾಗಿ ಭಾವಿಸಬೇಡಿ. ನಿಮ್ಮ ಬಗ್ಗೆ ನೀವು ಕಡಿಮೆ ಬೆಲೆಯಿರುವ ರೀತಿ ಮಾತನಾಡಬೇಡಿ. ನಿಮ್ಮ ಬಗ್ಗೆ ಉತ್ತಮವಾದ ವಿಷಯವನ್ನೇ ಮಾತನಾಡಿ. ಹಾಗಂತ ಅತೀಯಾಗಿ ನಿಮ್ಮನ್ನು ನೀವೇ ಹೊಗಳಬೇಡಿ. ಬದಲಾಗಿ ಇತರರು ನಿಮಗೆ ಅಗೌರವ ತೋರದ ರೀತಿ, ನಡೆದುಕ“ಳ್ಳಿ. ಆಗ ಜನ ನಿಮ್ಮನ್ನು ಗೌರವಿಸಲು ಶುರು ಮಾಡುತ್ತಾರೆ.
ಎದುರಿನವರ ಮನಸ್ಸನ್ನು ಅರ್ಥ ಮಾಡಿಕೊಳ್ಳಿ, ನಿಮ್ಮ ತಪ್ಪನ್ನು ನೀವು ತಿದ್ದಿಕೊಳ್ಳಿ: ಯಾವಾಗಲೂ ನನ್ನದೇ ಸರಿ ಎನ್ನುವವರನ್ನು ಯಾರೂ ಗೌರವಿಸುವುದಿಲ್ಲ. ನೀವು ಹಿರಿಯರಾಗಿದ್ದರೂ, ನಾನು ಮಾಡಿದ್ದೇ ಸರಿ ಎನ್ನುವ ಅಹಂ ನಿಮ್ಮಲ್ಲಿದ್ದರೆ, ನಿಮ್ಮನ್ನು ಕಿರಿಯರೂ ಗೌರವಿಸುವುದಿಲ್ಲ. ಹಾಗಾಗಿ ತಪ್ಪು ತಿದ್ದಿಕ“ಂಡು, ಎದುರಿನವರನ್ನು ಅರ್ಥ ಮಾಡಿಕ“ಳ್ಳುವ ಗುಣ ನಿಮ್ಮಲ್ಲಿದ್ದರೆ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ.
ಸುಖ-ದುಃಖ ಸಮನಾಗಿ ಕಾಣಿ: ಸುಖ ಬಂದಾಗ ಹಾರಾಡುವುದು ಮತ್ತು ದುಃಖ ಬಂದಾಗ ಏನೂ ಬೇಡವೆಂಬ ರೀತಿ ಇರುವುದು ಉತ್ತಮವಲ್ಲ. ಯಾರು ಸುಖ ದುಃಖವನ್ನು ಸಮನಾಗಿ ಕಾಣುತ್ತಾರೋ, ಅಂಥವರು ಯಶಸ್ವಿಯಾಗುತ್ತಾರೆ. ಸಮಾಜ ಅಂಥವರನ್ನು ಗೌರವಿಸುತ್ತದೆ.
ಅತಿಯಾಸೆ ಬಿಡಿ: ಮನುಷ್ಯನಿಗೆ ಆಸೆ ಹೆಚ್ಚು ಅನ್ನುವ ಮಾತು ಬಳಕೆಯಲ್ಲಿದೆ. ಆಸೆ ಇರುವುದು ಸಾಮಾನ್ಯವೇ. ಆದರೆ ಅತಿಯಾಸೆ ಅನ್ನೋದು ಇದ್ದಾಗಲೇ, ಮನುಷ್ಯನ ನೆಮ್ಮದಿ ಹಾಳಾಗೋದು. ಮತ್ತು ಆತನ ಮೇಲಿರುವ ಗೌರವ ಕಡಿಮೆಯಾಗೋದು. ಹಾಗಾಗಿ ಜೀವನದಲ್ಲಿ ನಿರೀಕ್ಷೆ ಬಿಡಿ, ಶ್ರಮವಹಿಸಿ ಜೀವಿಸುವುದು ಕಲಿಯಿರಿ.




