Kumta News: ಉತ್ತರ ಕನ್ನಡ ಜಿಲ್ಲೆ: ತಿನ್ನಲು ಊಟ ಕೇಳಿದ್ದಕ್ಕೆ, ಅಲೆಮಾರಿ ದಂಪತಿ ಮೇಲೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ಕುಮಟಾದ ಗೋವರ್ಧನ ಹೋಟೆಲ್ ನಲ್ಲಿ ನಡೆದ ಅಮಾನವೀಯ ಘಟನೆ ನಡೆದಿದ್ದು, ಹೊಟೇಲ್ ಮಾಲೀಕ ಗಣೇಶ್ ನಾಯಕ್ ಹಾಗೂ ವಾಚ್ ಮೆನ್ ಗೂರ್ಕ ಗಣೇಶ್ ಹಲ್ಲೆ ನಡೆಸಿದವರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ದಂಪತಿ ಕುಮಟಾದ ಈ ಹೋಟೇಲಿನಲ್ಲಿ ಆಹಾರ ಕೇಳಿದ್ದು, ಭಿಕ್ಷುಕರೆಂಬ ಕಾರಣಕ್ಕೆ ಇವರಿಬ್ಬರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅಲೆಮಾರಿ ಕೂಡ ಹೋಟೇಲ್ ಬಳಿ ಕಲ್ಲು ಬಿಸಾಕಿದ್ದಾನೆ. ಈ ರೀತಿ ಮಾಡಿದ್ದಕ್ಕೆ ಕೋಪ ಬಂದು, ಮಾಲೀಕ ಹಲ್ಲೆ ನಡೆಸಿರಬಹುದು ಎಂದು ಹೇಳಲಾಗಿದೆ.
ಸದ್ಯ ಉತ್ತರಕನ್ನಡ ಜಿಲ್ಲೆಯ ಕುಮಟಾ ಪೋಲೀಸ್ ಸ್ಟೇಶನ್ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಗಣೇಶ್ ನಾಯ್ಕ್ ಮತ್ತು ಗಣೇಶ್ನನ್ನು ಪೋಲೀಸರು ಬಂಧಿಸಿದ್ದಾರೆ. ಹಲ್ಲೆಯಾದ ರಮೇಶ ದ್ಯಾಮಣ್ಣ ಅಲೆಮಾರಿ ಹಾಗೂ ದ್ಯಾಮವ್ವ ರಮೇಶ ಅಲೆಮಾರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತನಿಖೆ ಬಳಿಕ ನಿಜಾಂಶ ತಿಳಿಯಬೇಕಿದೆ.




