Political News: ಬಂಡೀಪುರ ಮತ್ತು ನಾಗರಹ“ಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಅವರು, ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕರುನಾಡಿನ ಈ ಗಿರಿ-ಕಾನನಗಳು ಕೇವಲ ವೃಕ್ಷ ಸಂಕುಲವಲ್ಲ; ಇವು ಪ್ರಕೃತಿ ಮಾತೆ ನಮ್ಮ ತಾಯ್ನಾಡಿಗೆ ಧಾರೆ ಎರೆದಿರುವ ಭವ್ಯ ಚೇತನ, ಸೌಂದರ್ಯದ ಮಹಾ ನಿಧಿ. ಅವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹಾಗೆಯೇ, ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಜನರಿಗೆ ಈ ಕಾನನ ಸೌಂದರ್ಯವನ್ನು ಸವಿಯುವ ಅವಕಾಶ ಕಲ್ಪಿಸಿಕೊಡುವುದೂ ಸಹ ಅಷ್ಟೇ ಮುಖ್ಯವಾಗಿದೆ.
ತಜ್ಞರ ತಾಂತ್ರಿಕ ಸಮಿತಿಯ ಶಿಫಾರಸಿನ ಅನ್ವಯ, ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿಯನ್ನು ಪುನರಾರಂಭಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಸಮಿತಿಯ ವೈಜ್ಞಾನಿಕ ಮೌಲ್ಯಮಾಪನ ಹಾಗೂ ಪರಿಣಾಮಕಾರಿ ಸಾಗಣೆ ಸಾಮರ್ಥ್ಯದ (Carrying capacity) ಆಧಾರದ ಮೇಲೆ, ವನ್ಯಜೀವಿ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಿ ಅತ್ಯಂತ ನಿಯಂತ್ರಿತ ರೀತಿಯಲ್ಲಿ ಈ ಸಫಾರಿಗಳನ್ನು ನಡೆಸಲಾಗುವುದು.
ಜೀವವೈವಿಧ್ಯತೆಯ ರಕ್ಷಣೆ, ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಆರ್ಥಿಕ ಪ್ರಗತಿಯನ್ನು ಒಳಗೊಂಡ ಸುಸ್ಥಿರ ಪರಿಸರ ಪ್ರವಾಸೋದ್ಯಮಕ್ಕೆ ಕರ್ನಾಟಕ ಯಾವಾಗಲೂ ಬದ್ಧವಾಗಿದೆ. ನಮ್ಮ ಅರಣ್ಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಪ್ರಕೃತಿಯ ಬಗ್ಗೆ ಗೌರವ ಮೂಡುವಂತಾಗಬೇಕು ಹಾಗೂ ನಮ್ಮ ಕಾಡು, ವನ್ಯಜೀವಿಗಳು ಮತ್ತು ಕಾಡನ್ನೇ ನಂಬಿ ಬದುಕುವ ಸಮುದಾಯಗಳು ಮುಂದಿನ ಪೀಳಿಗೆಗೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ನಾವು ಸದಾ ಶ್ರಮಿಸುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕರುನಾಡಿನ ಈ ಗಿರಿ-ಕಾನನಗಳು ಕೇವಲ ವೃಕ್ಷ ಸಂಕುಲವಲ್ಲ; ಇವು ಪ್ರಕೃತಿ ಮಾತೆ ನಮ್ಮ ತಾಯ್ನಾಡಿಗೆ ಧಾರೆ ಎರೆದಿರುವ ಭವ್ಯ ಚೇತನ, ಸೌಂದರ್ಯದ ಮಹಾ ನಿಧಿ. ಅವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹಾಗೆಯೇ, ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಜನರಿಗೆ ಈ ಕಾನನ ಸೌಂದರ್ಯವನ್ನು ಸವಿಯುವ ಅವಕಾಶ ಕಲ್ಪಿಸಿಕೊಡುವುದೂ ಸಹ ಅಷ್ಟೇ ಮುಖ್ಯವಾಗಿದೆ.
ತಜ್ಞರ…
— DK Shivakumar (@DKShivakumar) June 26, 2026