Sandalwood: ಮನೆಯಲ್ಲೇ ನಡೆದ ಯಕ್ಷಗಾನದಲ್ಲಿ ಬಣ್ಣ ಹಚ್ಚಿದ ರಿಷಬ್ ಶೆಟ್ಟಿ ಮಗ ರಣ್ವಿತ್

Sandalwood: ಕರಾವಳಿಯ ವೈಭವ, ಭೂತಾರಾಧನೆಯ ಬಗ್ಗೆ ಇಡೀ ಪ್ರಪಂಚಕ್ಕೆ ತಿಳಿಸಿರುವ ನಟ ರಿಷಬ್ ಶೆಟ್ಟಿ ಸದಾ ದೇವರಲ್ಲಿ ಭಕ್ತಿ, ದೈವಾರಾಧನೆ ಮಾಡುವವರು. ಅವರ ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ರಿಲೀಸ್ ಆದ ಬಳಿಕ ಅವರು ದೇವಸ್ಥಾನಕ್ಕೆ ಹೋಗುವುದು, ಪೂಜೆ, ಹೋಮ-ಹವನ, ಕೋಲ ಮಾಡಿಸುವುದನ್ನೆಲ್ಲ ನಾವು ನೀವು ನೋಡಿದ್ದೇವೆ.

ಇದೀಗ ರಿಷಬ್ ತಮ್ಮ ಮನೆಯಲ್ಲಿಯೇ ವಿಶೇಷ ಪೂಜೆ, ನಾಗಾರಾಧನೆ, ಕುಣಿತ ಭಜನೆ ಮತ್ತು ಯಕ್ಷಗಾನ ಏರ್ಪಡಿಸಿದ್ದು, ತಮ್ಮ ಮಗನ ಮೂಲಕ ಕರಾವಳಿ ಹೆಮ್ಮೆ ಯಕ್ಷಗಾನದ ವೈಭವವನ್ನು ತೋರಿಸಿದ್ದಾರೆ. ರಿಷಬ್ ಮನೆಯಲ್ಲೇ ನಡೆದ ಯಕ್ಷಗಾನದಲ್ಲಿ ರಿಷಬ್ ಪುತ್ರ ರಣ್ವೀತ್ ಬಣ್ಣ ಹಚ್ಚಿದ್ದಾರೆ. ಮಾರಣಕಟ್ಟೆ ಯಕ್ಷಗಾನ ಮೇಳದವರಿಂದ ಯಕ್ಷಗಾನ ವೈಭವ ನಡೆದಿತ್ತು.

ಈ ಬಗ್ಗೆ ವೀಡಿಯೋ ಶೇರ್ ಮಾಡಿರುವ ನಟ ರಿಷಬ್ ಶೆಟ್ಟಿ, ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ ನಮ್ಮ ಮನೆಯಲ್ಲಿ ನೆಡೆದಾಗ ಮನ ತುಂಬಿದ ಕ್ಷಣಗಳು. We don’t define our roots , our roots define us ಎಂಬ ಶೀರ್ಷಿಕೆ ನೀಡಿದ್ದಾರೆ. ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

About The Author