Uttara Pradesh: ಸತ್ತು 13 ದಿನಗಳಾದ ಬಳಿಕ ಬಂದು ಬಾಗಿಲು ತಟ್ಟಿದ ವ್ಯಕ್ತಿ: ಬೆಚ್ಚಿಬಿದ್ದ ಮನೆಮಂದಿ

Uttara Pradesh News: ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಸತ್ತ ವ್ಯಕ್ತಿ 13ನೇ ದಿನಕ್ಕೆ ಮನೆ ಮರಳಿ ಬಂದ ಘಟನೆ ನಡೆದಿದೆ. 40 ವರ್ಷ ವಯಸ್ಸಿನ ಗಿರಿಧರ್ ಸಿಂಗ್ ಎಂಬಾತ ಯಾರದ್ದೋ ಮೇಲೆ ಹಲ್ಲೆ ನಡೆಸಿ, ಜೈಲಿಗೆ ಹೋಗಿದ್ದ. ಬಳಿಕ ಆತ ಬಿಡುಗಡೆಯಾದಾಗ ಗಿರಿಧರ್ ನಾಪತ್ತೆಯಾಗಿದ್ದ.

ಗಿರಿಧರ್ ನಾಪತ್ತೆಯಾಗಿದ್ದಾನೆಂದು ಆತನ ಪೋಷಕರು ದೂರು ದಾಖಲಿಸಿದ್ದರು. ಪೋಲೀಸರು ಈ ಬಗ್ಗೆ ತನಿಖೆ ನಡೆಸಿದಾಗ, ಸ್ಥಳೀಯ ಮಸೂರಿ ಕಾಲುವೆಯಲ್ಲಿ 1 ಶವ ಪತ್ತೆಯಾಗಿತ್ತು. ಅದೇ ನಿಮ್ಮ ಮಗನ ಶವವಾಗಿರಬಹುದು ಎಂದು ಹೇಳಿದಾಗ, ಗಿರಿಧರ್ ಸಿಂಗ್ ತಂದೆ ತಾಯಿ ಕೂಡ ಆ ಶವ ತಮ್ ಮಗನದ್ದೇ ೆಂದಿದ್ದಾರೆ. ಪೋಷಕರ ಮಾತು ಕೇಳಿದ ಪೋಲೀಸರು ಡಿಎನ್‌ಎ ಪರೀಕ್ಷೆ ಮಾಡದೇ, ಶವವನ್ನು ಹಸ್ತಾಂತರಿಸಿದ್ದಾರೆ.

ಹೀಗಾಗಿ ಗಿರಿಧರ್ ಮೇಲೆ ಹಲ್ಲೆ ನಡೆಸಿ, ಆತ ಸಾವನ್ನಪ್ಪಿದ್ದಾೆಂದು ತಿಳಿದ ಆತನ ಪೋಷಕರು, ಯಾರದ್ದೋ ಶವಕ್ಕೆ ಸಂಸ್ಕಾರವನ್ನೂ ಮಾಡಿದ್ದರು. ಆದರೆ 13ನೇ ದಿನದ ತಿಥಿ ಬಳಿಕ ಗಿರಿಧರ್ ಸಿಂಗ್ ವಾಪಸ್ ಮನೆಗೆ ಬಂದಿದ್ದಾನೆ. ಆತನನ್ನು ನೋಡಿದ ಪೋಷಕರು ಮತ್ತು ಸ್ಥಳೀಯರು ದಂಗಾಗಿದ್ದಾರೆ. ಆಗ ಗಿರಿಧರ್ ಸಿಂಗ್ ತಾನು ಸತ್ತಿರಲಿಲ್ಲ. ಜೈಲಿನಿಂದ ಬಿಡುಗಡೆಯಾಗಿ ಪಂಜಾಬ್‌ಗೆ ತೆರಳಿದ್ದೆ ಎಂದು ಹೇಳಿದ್ದಾನೆ. ಸದ್ಯ ಪೋಲೀಸರು ಈ ಕೇಸ್‌ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

About The Author