Sandalwood: ನಮ್ಮಲ್ಲಿ ಅದೆಷ್ಟೋ ಟ್ಯಾಲೆಂಟ್ಗಳು ಇನ್ಫ್ಲುಯೆನ್ಸ್ ಕಾರಣದಿಂದ ಮೂಲೆ ಗುಂಪಾಗಿದೆ. ಸ್ಪರ್ಧೆಗೆ ಸೇರುವುದಿದ್ದರೆ, ಆಫೀಸಿನಲ್ಲಿ ಕೆಲಸಕ್ಕೆ ಸೇರುವುದಿದ್ದರೆ, ಸಿನಿಮಾ ಜಗತ್ತಿಗೆ ಬರಬೇಕಿದ್ದರೆ, ಹೀಗೆ ಎಲ್ಲೇ ಹೋದರು ಇಂದಿನ ಕಾಲದಲ್ಲಿ ಜನ ಇನ್ಫ್ಲುಯೆನ್ಸ್ ಇಲ್ಲದೇ, ಕೆಲಸವೇ ನೀಡದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.
ಆದರೆ ಪ್ರಿಯಾ ಸುದೀಪ್ ಅಂಥ ಟ್ಯಾಲೆಂಟ್ಗಳ ಹುಡುಕಾಟದಲ್ಲಿದ್ದಾರೆ. ಪ್ರಿಯಾ ಸುದೀಪ್, ತಮ್ಮ ಮುಂದಿನ ಸಿನಿಮಾಗಾಗಿ ಅತ್ಯುತ್ತಮ ಕಥೆ ಮತ್ತು ಕಥೆಗಾರರನ್ನು ಹುಡುಕುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಮ್ಯಾಂಗೋ ಪಚ್ಚ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇದೀಗ ಮುಂದಿನ ಸಿನಿಮಾ ತಯಾರಿಯಲ್ಲಿರುವ ಪ್ರಿಯಾ ಸುದೀಪ್, ಕಥೆಗಾರಿಗಾಗಿ ಸುವರ್ಣಾವಕಾಶ ಕಲ್ಪಿಸಿದ್ದಾರೆ. ಮೌಲಿಕ ಕಥೆ, ಚಿತ್ರಕಥೆ, ವಿಶಿಷ್ಟ ಕಥೆ ಸೇರಿ ಎಲ್ಲಾ ರೀತಿಯ ಕಥೆಗಳಿಗೂ ಅವಕಾಶವಿದೆ ಎಂದಿರುವ ಪ್ರಿಯಾ ಸುದೀಪ್, ಇದು ಸಾಮಾನ್ಯ ಕಥೆಗಳಿರದೇ, ಮನಮುಟ್ಟುವ, ಭಾವನೆ, ಚಿಂತನೆ ಹೆಚ್ಚುವ ವಿಚಾರಗಳೂ ಇರಬೇಕು ಎಂದು ಹೇಳಿದ್ದಾರೆ.
ಆಸಕ್ತರು 6363307434 ಸಂಖ್ಯೆಗೆ ವಾಟ್ಸಪ್ ಮಾಡಿ, ಸಂಪರ್ಕಿಸಬಹುದು. ಅಲ್ಲದೇ ಸಿನಿಮಾ ರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಕಾತುರದಲ್ಲಿದ್ದವರಿಗೆ ಇದು 1 ಸದಾವಕಾಶವಾಗಿದ್ದು, ಸದುಪಯೋಗಪಡಿಸಿಕ“್ಳಬಹುದಾಗಿದೆ.




