Haveri: ಕಾರಹುಣ್ಣಿಮೆ ಸಂಭ್ರಮದ ಮಧ್ಯೆ ಕೋಮುಘರ್ಷಣೆ ಕುಡುಗೋಲಿನಿಂದ ಹಿಂದೂಗಳ ಮೇಲೆ ಹಲ್ಲೆ

Haveri News: ಹಾವೇರಿ: ಹಾವೇರಿಯಲ್ಲಿ ಕಾರಹುಣ್ಣಿಮೆ ಸಂಭ್ರಮದ ಮಧ್ಯೆ ಕೋಮು ಉದ್ವಿಗ್ನತೆ ಉಂಟಾಗಿದ್ದು, ಹೋರಿ ಸ್ಪರ್ಧೆ ಆಗುವಾಗ, ಕೈಯಲ್ಲಿ ಕುಡುಗೋಲು ಹಿಡಿದು, ರಕ್ತ ಬರುವಂತೆ ಹಲ್ಲೆ ಮಾಡಲಾಗಿದೆ.

ಕಾರಹುಣ್ಣಿಮೆ ದಿನವೇ ನರೇಗಲ್ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಗಲಾಟೆಯಾಗಿದ್ದು, ಅನ್ಯಕೋಮಿನ ಯುವಕರು, ಹಿಂದೂಗಳ ಮೇಲೆ ಕುಡುಗೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಮಸೀದಿ ಎದುರು ಈ ಗಲಾಟೆ ನಡೆದಿದ್ದು, ಖಾಜಾಸಾಬಾ ಗೌಂಡಿ ಎಂಬ ಅನ್ಯಕೋಮಿನ ಯುವಕ ಸಿಕ್ಕ ಸಿಕ್ಕವರ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ.

ಲೋಹಿತ್, ಶಿವರಾಜ, ನಾಗಪ್ಪ, ಜಯಪ್ಪ, ನಿಂಗರಾಜ ಹಾಗೂ ಮಲ್ಲಪ್ಪಗೆ ಗಂಭೀರ ಗಾಯವಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೋಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸದ್ಯ ನರೇಗಲ್ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

About The Author