Haveri: ಮಸೀದಿ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಗಲಾಟೆ, FIR ದಾಖಲಾದ ಬಳಿಕ ಕ್ರಮ: ಎಸ್ಪಿ ಯಶೋಧಾ

Haveri News: ಹಾವೇರಿ: ಹಾವೇರಿಯಲ್ಲಿ ಕಾರಹುಣ್ಣಿಮೆ ಸಂಭ್ರಮದ ವೇಳೆ ಕೋಮುಗಲಭೆ ನಡೆದಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹಾವೇರಿ ಎಸ್ಪಿ ಮುಂದಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ, ಕಾರಹುಣ್ಣಿಮೆ ಪ್ರಯುಕ್ತ ಕರುಗಳಿಗೆ ಬಣ್ಣ ಹಚ್ಚಿ ಬೀಡಲಾಗಿತ್ತು. ಮಸೀದಿ ಮತ್ತು ಗ್ರಾ.ಪಂ ಬಿಲ್ಡಿಂಗ್ ಎರಡೂ ಅಕ್ಕಪಕ್ಕದಲ್ಲಿವೆ. ಇಲ್ಲಿ ಪಟಾಕಿ ಹಚ್ಚಿದ್ರು ಅಂತೇಳಿ ಕೆಲ ಯುವಕರು ಗಲಾಟೆ ಮಾಡಿದ್ದಾರೆ. ಖಾಜಾ ಮತ್ತು ಲೋಹಿತ್ ಅನ್ನೋ ಯುವಕರ ಮಧ್ಯೆ ಗಲಾಟೆ ಆಗಿದೆ. ಖಾಜಾ ಅನ್ನೋ ಲೋಹಿತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ಸುಮಾರು 8 ಜನ ಯುವಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ ಮೂರು ಜನರು ಕಿಮ್ಸ್ ನಲ್ಲಿ ದಾಖಲಾಗಿದ್ದಾರೆ.

ಇನ್ನೂ ಈ ಬಗ್ಗೆ ಯಾವುದೇ FIR ದಾಖಲು ಆಗಿಲ್ಲ.. FIR ದಾಖಲಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.. ಎರಡೂ ಕಡೆ ಮುಖಂಡ ಜತೆ ನಾನು ಸಹ ಮಾತನಾಡಿದ್ದೇನೆ. ಗಲಾಟೆ ಮಾಡಿದವರಿಗೆ ಯಾರೂ ಸಹ ಬೆಂಬಲ ಸೂಚಿಸುತ್ತಿಲ್ಲ. ನರೇಗಲ್ ಗ್ರಾಮ ಈಗ ಶಾಂತಿಯುತವಾಗಿದೆ. ಖಾಜಾ ಮತ್ತು ಬಾಷ ಅವರ ತಂದೆ ಸೇರಿ 6 ಜನರಿದ್ದಾರೆ. ಲೋಹಿತ್ ಸೇರಿದಂತೆ ಈ ಕಡೆ ಸುಮಾರು 8 ಜನರಿದ್ದಾರೆ. FIR ದಾಖಲಿಸಿದ ಬಳಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.

About The Author