ಹಿಮಾಚಲ ಪ್ರದೇಶ ಸರ್ಕಾರ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಭದ್ರತೆ ನೀಡಲು ನಿರ್ಧರಿಸಿದ ಬೆನ್ನಲ್ಲೆ ಇದೀಗ ಕೇಂದ್ರ ಸರ್ಕಾರ ಕೂಡ ನಟಿಗೆ ವೈ ಶ್ರೇಣಿಯ ಭದ್ರತೆ ನೀಡಲು ಮುಂದಾಗಿದೆ.

ಶಿವಸೇನೆ ಮುಖಂಡ ಸಂಜಯ್ ರಾವತ್ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ನಟಿ ಕಂಗನಾ ರಣಾವತ್ ತಮಗೆ ಜೀವ ಬೆದರಿಕೆ ಇದೆ ಅಂತಾ ಹೇಳಿಕೊಂಡಿದ್ರು. ಹಿಮಾಚಲ ಪ್ರದೇಶ ಮೂಲದ ಈ ನಟಿಗೆ ಹಿಮಾಚಲ ಪ್ರದೇಶ ಸರ್ಕಾರ ಭದ್ರತೆ ನೀಡುತ್ತೇವೆ ಅಂತಾ ಘೋಷಿಸಿತ್ತು.
ಮಹಾರಾಷ್ಟ್ರಕ್ಕೆ ಬರದಂತೆ ಶಿವಸೇನೆ ಮುಖಂಡ ಆವಾಜ್ ಹಾಕಿರುವ ಬೆನ್ನಲ್ಲೇ ಕಂಗನಾ ರಣಾವತ್ ಸೆ.9ರಂದು ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಹೀಗಾಗಿ ಈ ವೇಳೆ ಕೇಂದ್ರ ವೈ ಕೆಟಗರಿ ಭದ್ರತೆ ನೀಡಲು ಚಿಂತಿಸುತ್ತಿದೆ. ವೈ ಕೆಟಗರಿ ಭದ್ರತೆಯಲ್ಲಿ ಕಮಾಂಡೋ ಸೇರಿದಂತೆ 11 ಮಂದಿ ಸಿಬ್ಬಂದಿ ರಕ್ಷಣೆ ನೀಡುತ್ತಾರೆ.
ಮುಂಬೈಯನ್ನು ಪಿಓಕೆಗೆ ಹೋಲಿಸಿದ್ದ ಕಂಗನಾ ವಿರುದ್ಧ ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರ ತಿರುಗಿಬಿದ್ದಿತ್ತು. ಇದರಿಂದಾಗಿ ತಮಗೆ ಭದ್ರತೆ ನೀಡಬೇಕು ಅಂತಾ ನಟಿ ಮನವಿ ಮಾಡಿಕೊಂಡಿದ್ದರು.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




