Health Tips: ಆದಷ್ಟು ಶಿಶುಗಳನ್ನು ಈ ವಸ್ತುಗಳಿಂದ ದೂರವಿಡುವುದು ಉತ್ತಮ..

Health Tips: ಹಿಂದಿನ ಕಾಲದಲ್ಲಿ ಮಾಯಿಶ್ಚರೈಸರ್, ವೈಪ್ಸ್, ಕ್ರೀಮ್, ಜೆಲ್ ಅನ್ನೋ ಕಾನ್ಸೆಪ್ಟ್ ಇರಲೇ ಇಲ್ಲ. ಎಣ್ಣೆ-ಸೋಪು, ಮನೆಯಲ್ಲೇ ಸಿಗುವ ವಸ್ತುಗಳಿಂದ ತಯಾರಿಸಿದ ಶ್ಯಾಂಪೂ ಇಷ್ಟೇ ಇತ್ತು. ಆದರೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನೇ ಶಿಶುಗಳ ಮೇಲೆ ಪ್ರಯೋಗಿಸುತ್ತಿದ್ದೇವೆ. ಆದರೆ ನಾವು ಕೆಲ ವಸ್ತುಗಳಿಂದ ಶಿಶುಗಳನ್ನು ದೂರವಿಡಬೇಕು. ಹಾಗಾದ್ರೆ ಆ ವಸ್ತುಗಳು ಯಾವುದೆಂದು ತಿಳಿಯೋಣ ಬನ್ನಿ..

ಬಾಡಿ ವಾಶ್ ಮತ್ತು ಶ್ಯಾಂಪೂ, ಕ್ರೀಮ್: ಇಂದಿನ ಕಾಲದಲ್ಲಿ ಬಾಡಿ ವಾಶ್, ಶ್ಯಾಂಪೂ, ಕ್ರೀಮ್ ನಲ್ಲಿ ಕೆಮಿಕಲ್ ಪ್ರಮಾಣವಿರುತ್ತದೆ. ಕೆಮಿಕಲ್ ಬಳಸದೇ ಇವನ್ನೆಲ್ಲ ತಯಾರಿಸಲು ಸಾಧ್ಯವೇ ಇಲ್ಲ. ಇದರಿಂದ ನಿಮ್ಮ ಮಕ್ಕಳಿಗೆ ಅಲರ್ಜಿಯೂ ಆಗಬಹುದು. ಹಾಗಾಗಿ ನೀವು ಆದಷ್ಟು ಮಕ್ಕಳಿಗೆ ಶ್ಯಾಂಪೂ ಬದಲು, ಹೋಮ್‌ ಮೇಡ್ ಶ್ಯಾಂಪೂ, ಕಡಲೆ ಹುಡಿ, ತೆಂಗಿನ ಹಾಲು ಬಳಸಿ. ಸೋಪ್ ಬಳಸಲೇಬೇಕು ಎಂದಲ್ಲಿ ಆರೋಗ್ಯಕರವಾದ ಸೋಪ್ ಬಳಸಿ.

ವೈಪ್ಸ್: ಪರಿಮಳ ಬರುವ ವೈಪ್ಸ್ ಬಳಸುವುದರಿಂದ, ಮಗುವಿನ ತ್ವಚೆಗೆ ಹಾನಿಯಾಗಬಹುದು. ಏಕೆಂದರೆ, ಅದರಲ್ಲಿ ಕೆಮಿಕಲ್ ಇರುತ್ತದೆ. ಹಾಗಾಗಿ ನೀವು ಮನೆಯಲ್ಲಿಯೇ ಉತ್ತಮವಾಗ ಬಿಳಿ ಕಾಟನ್ ಬಟ್ಟೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ, ಬಳಸಿ. ಇದು ದೇಹಕ್ಕೂ ಉತ್ತಮ, ಮಗುವಿನ ಆರೋಗ್ಯಕ್ಕೂ ಉತ್ತಮ.

ರಬ್ಬರ್ ಆಟಿಕೆ: ರಬ್ಬರ್ ಆಟಿಕೆಗಳಲ್ಲಿ ಎಲ್ಲವೂ ಇತ್ತಮ ಕ್ವಾಲಿಟಿಯದ್ದೇ ಎಂದು ಹೇಳಲಾಗುವುದಿಲ್ಲ. ಕೆಲವು ಆಟಿಕೆಗಳು ನಿಮ್ಮ ಮಕ್ಕಳ ಜೀವಕ್ಕೆ ಹಾನಿ ಮಾಡಬಹುದು. ಹಾಗಾಗಿ ರಬ್ಬರ್ ಆಟಿಕೆಗಳನ್ನು ಹೆಚ್ಚು ಬಳಸಬೇಡಿ. ಸಾಫ್ಟ್ ಟಾಯ್ಸ್ ಕೂಡ ಹೆಚ್ಚು ಬಳಸಬಾರದು ಅಂತಾರೆ ವೈದ್ಯರು.

ಪ್ಲಾಸ್ಟಿಕ್ ಫೀಡಿಂಗ್ ಬಾಟಲ್: ಪ್ಲಾಸ್ಟಿಕ್ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅನ್ನೋದು ಎಲ್ಲರಿಗೂ ತಿಳಿದಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ನಿಮಗೆ ಸ್ಟೀಲ್ ಫೀಡಿಂಗ್ ಬಾಟಲಿ ಕೂಡ ಲಭ್ಯವಿದೆ. ಹಾಗಾಗಿ ಪ್ಲಾಸ್ಟಿಕ್ ಬದಲು ನೀವು ಸ್ಟೀಲ್ ಫೀಡಿಂಗ್ ಬಾಟಲಿ ಬಳಸಬಹುದು.

ಪೌಡರ್: ಮಗು ಘಮ ಘಮ ಎನ್ನಲಿ, ಅದರ ಮೈಮೇಲಿರುವ ತೇವಾಂಶ ಕಡಿಮೆಯಾಗಲಿ ಎಂದು ಪೌಡರ್ ಹಾಕುತ್ತಾರೆ. ಆದರೆ ಮಕ್ಕಳಿಗೆ ಪೌಡರ್ ಹಾಕುವುದರಿಂದ ಅವರಿಗೆ ಉಸಿರಾಟದ ಸಮಸ್ಯೆ ಆಗಬಹುದು. ಅಥವಾ ಸ್ಕಿನ್ ಅಲರ್ಜಿಯಾಗಬಹುದು. ಹಾಗಾಗಿ ಪೌಡರ್ ಬಳಸದಿರುವುದೇ ಉತ್ತಮ. ಅಥವಾ ಮುಖಕ್ಕೆ ಪೌಡರ್ ಹಾಕಬೇಡಿ.

About The Author