Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ಈ ರೀತಿ ಹಾಲು ನೀಡಿ..

Health Tips: ಮಕ್ಕಳು ಶಕ್ತಿವಂತರಾಗಲಿ, ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿ, ಅವರ ಕೂದಲು, ತ್ವಚೆ ಚೆನ್ನಾಗಿರಲಿ ಎಂದು ನಾವು ಮಕ್ಕಳಿಗೆ ಕುಡಿಯಲು ಹಾಲು ನೀಡುತ್ತೇವೆ. ಆದರೆ ಬರೀ ಹಾಲು ನೀಡುವ ಬದಲು, ನೀವು ಆ ಹಾಲಿಗೆ ಕೆಲ ಆರೋಗ್ಯಕರ ವಸ್ತುಗಳನ್ನು ಸೇರಿಸಿ ನೀಡುವುದು ಉತ್ತಮ. ಅವ್ಯಾವುವು ಅಂತಾ ತಿಳಿಯೋಣ ಬನ್ನಿ..

ಹಾಲು-ಬೆಲ್ಲ: ಹಾಲಿನ ಜತೆಗೆ ಬೆಲ್ಲ ಹಾಕಿ ಕುಡಿಯಲು ನೀಡಿ, ಇದರಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗುತ್ತದೆ. ನಿಮ್ಮ ಮಕ್ಕಳ ಮೂಳೆ ಬಲವಾಗುತ್ತದೆ.

ಹಾಲು-ಅರಿಶಿನ: ಹಾಲು ಮತ್ತು ಅರಿಶಿನ ಹಾಕಿ, ಚೆನ್ನಾಗಿ ಕುದಿಸಿ. ಇದನ್ನು ಗೋಲ್ಡನ್ ಮಿಲ್ಕ್ ಎನ್ನುತ್ತಾರೆ. ಅರಿಶಿನ ಹಾಲಿಗೆ ನೀವು ಕಲ್ಲು ಸಕ್ಕರೆ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಇತ್ಯಾದಿ ಸೇರಿಸಿ ಹಾಕಿ ಕುದಿಸಿದರೆ, ಅದರಿಂದ ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪದೇ ಪದೇ ಜ್ವರ, ನೆಗಡಿ ಬರುತ್ತಿದ್ದರೆ ನಿಮ್ಮ ಮಕ್ಕಳಿಗೆ ಈ ಹಾಲು ಮಾಡಿಕ“ಡಿ.

ಹಾಲು-ಖರ್ಜೂರ: ಬಿಸಿ ಹಾಲಿನ ಜತೆ ಖರ್ಜೂರ ಸೇವಿಸಲು ನೀಡಿ. ಇದರಿಂದ ಮಗುವಿನ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗುತ್ತದೆ. ಮಗು ಶಕ್ತಿವಂತವಾಗುತ್ತದೆ. ಸಕ್ಕರೆ ಬದಲು ಖರ್ಜೂರ ನೀಡಿದರೆ, ಸಹಿಯಾಗಿಯೂ ಇರುತ್ತದೆ. ಪ್ರೋಟೀನ್ ನಿಮ್ಮ ಮಕ್ಕಳ ದೇಹ ಸೇರುತ್ತದೆ.

ಹಾಲು-ಬಾದಾಮಿ: ನೀವು ಮಾರುಕಟ್ಟೆಯಲ್ಲಿ ಸಿಗುವ ಬಾದಾಮಿ ಹುಡಿ ಬಳಸಿ ನಿಮ್ಮ ಮಗುವಿಗೆ ನೀಡಿದರೆ, ಅದರಿಂದ ಹೆಚ್ಚು ಉಪಯೋಗವಾಗುವುದಿಲ್ಲ. ಏಕೆಂದರೆ ಅದರಲ್ಲಿ ಬಾದಾಮಿಗಿಂತ ಹೆಚ್ಚು ಸಕ್ಕರೆ ಮತ್ತು ಅರಿಶಿನ ಹಾಕಿರುತ್ತಾರೆ. ಲೇಬಲ್‌ ಮೇಲೆ ತೋರಿಸುವ ಬಾದಾಮಿ ಮತ್ತು ಕೇಸರಿ ದಳ ನೋಡಿ ಮೋಸ ಹೋಗಬೇಡಿ.

ಅದರ ಬದಲು ಮನೆಯಲ್ಲೇ ಬಾದಾಮಿ ಪುಡಿ ತಯಾರಿಸಿ. ಅಥವಾ ಬಾದಾಮಿ ನೆನೆಸಿ, ಕೈಯಿಂದ ತೇಯ್ದು, ಹಾಲಿಗೆ ಸೇರಿಸಿ, ಮಗುವಿಗೆ ಕುಡಿಯಲು ನೀಡಿ. ಇದರಿಂದ ನಿಮ್ಮ ಮಗುವಿನ ತ್ವಚೆ, ಕೂದಲು ಚೆಂದವಾಗುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.

About The Author