Health Tips: ಗರ್ಭಿಣಿಯರು ಮಾವಿನ ಹಣ್ಣು ತಿನ್ನಬೇಕೋ..? ಬೇಡವೋ..?

Health Tips: ಮಾವಿನಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಮಾವಿನ ಹಣ್ಣಿನ ಸೀಸನ್ ಯಾವಾಗ ಬರತ್ತೋ ಅಂತಾ ನಾವೆಲ್ಲಾ ಕಾಯ್ತಾ ಇರ್ತೀವಿ. ಆದರೆ ಗರ್ಭಿಣಿಯರಿಗೆ ಮಾತ್ರ ಮಾವಿನ ಹಣ್ಣು ತಿನ್ನುವ ಹಾಗಿಲ್ಲ ಅಂತಾ ಹೇಳಲಾಗಿದೆ.

ಹಾಗಾದ್ರೆ ಗರ್ಭಿಣಿಯರು ಮಾವಿನ ಹಣ್ಣನ್ನು ತಿನ್ನಲೇಬಾರದಾ.? ಅಥವಾ ಲಿಮಿಟಿನಲ್ಲಿ ಮಾಹಿನ ಹಣ್ಣಿನ ಸೇವನೆ ಮಾಡಬಹುದಾ ಅಂತಾ ತಿಳಿಯೋಣ ಬನ್ನಿ..

ಮಾವಿನಹಣ್ಣನ್ನು ಸೇವಿಸಿದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಆದರೂ ಅದನ್ನು ಬೇಸಿಗೆಯಲ್ಲಿ ಸೇವಿಸಲಾಗುತ್ತದೆ. ಏಕೆಂದರೆ ಸೀಸನಲ್ ಹಣ್ಣು ಸೇವಿಸುವುದರಿಂದ ನಮ್ಮ ದೇಹದಲ್ಲಿ ಶೀತ-ಉಷ್ಣ ಪ್ರಮಾಣ ಬ್ಯಾಲೆನ್ಸ್ ಆಗುತ್ತದೆ. ಈ ಕಾರಣಕ್ಕೆ ಉಷ್ಣವಾದರೂ ಮಾವಿನ ಹಣ್ಣನ್ನು ಬೇಸಿಗೆಯಲ್ಲಿ ಸೇವಿಸಲಾಗುತ್ತದೆ.

ಇನ್ನು ಗರ್ಭಿಣಿಯರು ಹೆಚ್ಚು ಉಷ್ಣ ಆಹಾರ ಸೇವಿಸಿದರೆ, ಅವರಿಗೂ ಮಗುವಿಗೂ ಆರೋಗ್ಯ ಸಮಸ್ಯೆ ಆಗಬಹುದು. ಹಾಗಾಗಿ ಮಾವಿನ ಹಣ್ಣನ್ನು ಮಿತವಾಗಿ ಸೇವಿಸಬಹುದು. ಅದರಲ್ಲೂ ಮಾವಿನ ಹಣ್ಣಿನ ಸೇವನೆಗೂ ಮುನ್ನ ಅರ್ಧ ಗಂಟೆ ಮಾವಿನ ಹಣ್ಣನ್ನು ನೀರಿನಲ್ಲಿ ಹಾಕಿಡಿ. ಇದರಿಂದ ಅದರಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ.

ಗರ್ಭಿಣಿಯರು ಯಾಕೆ ಹೆಚ್ಚು ಮಾವು ಸೇವಿಸಬಾರದು ಅಂದ್ರೆ, ಅದರಲ್ಲಿ ಸಕ್ಕರೆ ಪ್ರಮಾಣವಿರುತ್ತದೆ. ಮತ್ತು ಗರ್ಭಾವಸ್ಥೆಯಲ್ಲಿ ಸಕ್ಕರೆ ಖಾಯಿಲೆ ಬರುವ ಎಲ್ಲಾ ಸಂಭವವಿರುತ್ತದೆ. ಸಕ್ಕರೆ ಪ್ರಮಾಣ ಹೆಚ್ಚಾದರೆ, ಇದರಿಂದ ತಾಯಿ-ಮಗುವಿನ ಆರೋಗ್ಯ, ತೂಕ, ಜೀವ ಎಲ್ಲದಕ್ಕೂ ಹಾನಿ ಸಂಭವಿಸಬಹುದು. ಹಾಗಾಗಿ ಮಾವಿನ ಹಣ್ಣು ಹೆಚ್ಚಾಗಿ ಸೇವಿಸಿದರೆ, ಶುಗರ್ ಹೆಚ್ಚಾಗಬಹುದು ಎಂದು, ಮಾವಿನ ಹಣ್ಣನ್ನು ಸೇವಿಸಬಾರದು ಅಥವಾ ಮಿತವಾಗಿ ಸೇವಿಸಬೇಕು ಎನ್ನುತ್ತಾರೆ.

About The Author