Horoscope: ಕೆಲವರಿಗೆ ರಾಶಿ ರಾಶಿ ಸ್ನೇಹಿತರಿರುತ್ತಾರೆ. ಇನ್ನು ಕೆಲವರಿಗೆ ಬೆರಳೆಣಿಕೆಷ್ಟು ಸ್ನೇಹಿತರಿರುತ್ತಾರೆ. ಆದರೆ ಮತ್ತೆ ಕೆಲವರಿಗೆ ಸ್ನೇಹಿತರಿದ್ದರೂ ಇಲ್ಲದಂತಿರುತ್ತಾರೆ. ಏಕೆಂದರೆ ಅವರಿಗೆ ಏಕಾಂಗಿತನವೆಂದರೆ ಇಷ್ಟ. ಅದರಲ್ಲೂ ಮಹಿಳೆಯರು ಈ ರೀತಿ ಇರುತ್ತಾರೆ. ಅವರಿಗೆ ತಮ್ಮ ಮನೆ ಜನರ ಜತೆಗೆ ಮಾತ್ರ ಬಾಂಧವ್ಯ ಹೆಚ್ಚಾಗಿರುತ್ತದೆ. ಅಂಥ ರಾಶಿಯವರ ಬಗ್ಗೆ ತಿಳಿಯೋಣ ಬನ್ನಿ..
ಕನ್ಯಾ ರಾಶಿ: ಕನ್ಯಾ ರಾಶಿಯವರು ಏಕಾಂಗಿಯಾಗಿರಲು ಇಚ್ಛಿಸುತ್ತಾರೆ. ಏನಿದ್ದರೂ ತನಗೆ ಮಾತ್ರ ಅನ್ನೋ ಸ್ವಭಾವದ ಇವರು, ನಾಲ್ಕು ಜನರ ಮಧ್ಯೆಯೂ ತಾನು ಏಕಾಂಗಿ ಅಂತಲೇ ತಿಳಿದು ಬದುಕುತ್ತಾರೆ. ಕೆಲವು ಬಾರಿ ಇವರು ಜೀವಿಸುವ ರೀತಿ ಸ್ವಾರ್ಥ ಭಾವನೆ ಅಂತಲೇ ಎನ್ನಿಸುತ್ತದೆ.
ಮಕರ ರಾಶಿ: ಮಕರ ರಾಶಿಯ ಮಹಿಳೆಯರು ಕೂಡ ಏಕಾಂತದಲ್ಲಿರಲು ಹೆಚ್ಚು ಇಚ್ಛಿಸುತ್ತಾರೆ. ವೃತ್ತಿಗೆ ಸಂಬಂಧಿಸಿದ ಕೆಲಸ ಮಾಡಲು ಹೆಚ್ಚು ಇಷ್ಟಪಡುವ ಇವರು, ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸುತ್ತಾರೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಆರ್ಥಿಕವಾಗಿ ಸ್ವಾತಂತ್ರವಾಗಿರಲು ಇಚ್ಛಿಸುವವರು. ಅವರು ಪತಿ-ಮಕ್ಕಳ, ಸಂಸಾರದ ಮೇಲೆ ಹೆಚ್ಚು ಆಸಕ್ತಿ ವಹಿಸಿರುವುದಿಲ್ಲ. ಅವರಿಗೆ ಕರಿಯರ್ನಲ್ಲಿ ಯಶಸ್ಸು ಸಾಧಿಸಲು ಹೆಚ್ಚು ಆಸಕ್ತಿ ಇರುತ್ತದೆ. ಹಾಗಾಗಿ ವೃಶ್ಚಿಕ ರಾಶಿಯ ಮಹಿಳೆಯರು ಹೆಚ್ಚು ಏಕಾಂಗಿಯಾಗಿರಲು ಬಯಸುತ್ತಾರೆ.
ಕುಂಭ ರಾಶಿ: ಕುಂಭ ರಾಶಿಯವರು ಯಾರ ಮೇಲೆಯೂ ಅವಲಂಬಿತರಾಗಿರಲು ಇಚ್ಛಿಸುವುದಿಲ್ಲ. ಕಡೆತನಕ ಸ್ವಾಭಿಮಾನಿಯಾಗಿರಲು ಇಚ್ಛಿಸುತ್ತಾರೆ. ಅಲ್ಲದೇ ಇವರು ಹೆಚ್ಚು ಏಕಾಂಗಿಯಾಗಿರಲು ಬಯಸುತ್ತಾರೆ.




