Belagavi News: ಅಯೋಧ್ಯೆ ರಾಮಮಂದಿರದಲ್ಲಿ ಕೋಟ್ಯಂತರ ರೂಪಾಯಿ ಕಳ್ಳತನವಾಗಿರುವ ಕಾರಣಕ್ಕೆ, ಅಲರ್ಟ್ ಆಗಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾ ಹಾಕಿಸುವ ನಿರ್ಧಾರ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್, ರಾಮಮಂದಿರದಲ್ಲಿ ನಡೆದ ಘಟನೆಯಿಂದ ಅಗೌರವವಾಗಿದೆ. ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಇಂಥ ಘಟನೆ ನಮ್ಮ ರಾಜ್ಯದಲ್ಲಿ ನಡೆಯಬಾರದು. ಹೀಗಾಗಿ ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೆ ಸೇರುವ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲೇಬೇಕು.
ಕಂಟ್ರೋಲ್ ರೂಮ್ ಕೂಡ ಇರಬೇಕು. ಕಂಟ್ರೋಲ್ ರೂಮ್ ಸ್ಥಾಪಿಸುವ ಕೆಲಸ ನಾವು ಮಾಡಲಿದ್ದೇವೆ. ದೇವಸ್ಥಾನಕ್ಕೆ ಬರುವ ದೇಣಿಗೆ, ದಕ್ಷಿಣೆ ಎಲ್ಲವೂ ಸಿಸಿಟಿವಿ ಕಣ್ಗಾವಲಲ್ಲೇ ಇರಬೇಕು ಎಂದು ಸಿಎಂ ಆದೇಶಿಸಿದ್ದಾರೆ.
ಅಲ್ಲದೇ ಈ ಕ್ಯಾಮೆರಾಗಳನ್ನು ಪೋಲೀಸ್ ಸ್ಟೇಶನ್ಗಳಿಗೆ ನೇರವಾಗಿ ಸಂಪರ್ಕಿಸಲಾಗುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹುಂಡಿ ಇರುವ ಸ್ಥಳ, ಹಣ ಎಣಿಕೆ ಸ್ಥಳ ಎಲ್ಲೆಡೆ ಸಿಸಿಟಿವಿ ಅಳವಡಿಸಲಾಗುತ್ತದೆ. ದೇಗುಲದ ಚಟುವಟಿಕೆ ಮೇಲೆ ಇಡೀ ದಿನ ನಿಗಾ ಇರಿಸಲಾಗುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.




