Hubli News: ಅಬ್ಬಯ್ಯಗೆ ಸಚಿವ ಸ್ಥಾನ ಸಿಗಲಿ ಎಂದು ಬೆಂಬಲಿಗರಿಂದ ತಿರುಪತಿಯಲ್ಲಿ ಹರಕೆ

Hubli Political News: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬ ಆಶಯದೊಂದಿಗೆ ಅವರ ಬೆಂಬಲಿಗರು ತಿರುಮಲ ತಿರುಪತಿಯಲ್ಲಿ ವಿಶೇಷ ಹರಕೆ ಸಲ್ಲಿಸಿದ್ದಾರೆ. ನಾಮಿನೇಟ್ ಕಾರ್ಪೊರೇಟರ್ ಸಂತೋಷ ಪೂಜಾರ್ ನೇತೃತ್ವದಲ್ಲಿ ಮಂಡಿಯೂರಿ ತಿರುಪತಿ ಬೆಟ್ಟ ಏರಿದ ವಿಡಿಯೋ ಇದೀಗ ವೈರಲ್ ಆಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಮಿನೇಟ್ ಕಾರ್ಪೊರೇಟರ್ ಸಂತೋಷ ಪೂಜಾರ್ ಹಾಗೂ ಅವರ ಬೆಂಬಲಿಗರು, ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ ತಿರುಮಲ ತಿರುಪತಿ ಬೆಟ್ಟವನ್ನು ಮಂಡಿಯೂರಿ ಏರಿದರು.

ಪ್ರಸಾದ್ ಅಬ್ಬಯ್ಯ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಉತ್ತರ ಕರ್ನಾಟಕಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂಬ ಉದ್ದೇಶದಿಂದ ಈ ಹರಕೆ ಕೈಗೊಂಡಿದ್ದೇವೆ ಎಂದು ಬೆಂಬಲಿಗರು ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬೀಳದಿರುವ ಸಂದರ್ಭದಲ್ಲೇ, ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬ ಆಶಯದೊಂದಿಗೆ ಬೆಂಬಲಿಗರು ಕೈಗೊಂಡಿರುವ ಈ ಹರಕೆ ಹಾಗೂ ಅದರ ವಿಡಿಯೋ ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

About The Author