ನೀವು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಯುಸಿ…ಜಿಲ್ಲೆಗಳಲ್ಲಿ ಸಚಿವರಿಲ್ಲ: ಬಿ.ವೈ.ವಿಜಯೇಂದ್ರ ವ್ಯಂಗ್ಯ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದು, ರೈತರ ಬಗೆಗಿನ ಕಾಳಜಿ ತೋರುವುದನ್ನು ಬಿಟ್ಟು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ,, ಬರ ಬಂದಾಗ ಪ್ರಧಾನಿಗಳಿಗೆ ಪತ್ರ ಬರೆಯುವುದನ್ನು ಬಿಟ್ಟು ಬರ ಪರಿಹಾರಕ್ಕಾಗಿ ತಾವು ಹಾಗೂ ತಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಜನರ ಮುಂದಿಡಿ. ತಾವು ಕಲಬುರಗಿಯಲ್ಲಿ ಪ್ರಗತಿ ಪರಿಶೀಲನೆ ಮಾಡಿ ಬರ ಅಧ್ಯಯನಕ್ಕೆ ಸಚಿವರನ್ನು ನೇಮಕ ಮಾಡುತ್ತೇನೆ ಅಂತ ಹೇಳಿದ್ದು ಮರೆತು ಹೋಯಿತೇ. ರಾಜ್ಯದಲ್ಲಿ ಇಲ್ಲಿಯರೆಗೂ ಕೃಷಿ ಸಚಿವರ ನೇಮಕವಾಗಿಲ್ಲ, ಕಂದಾಯ ಸಚಿವರು ತುಮಕೂರು ಬಿಟ್ಟು ಮುಂದೆ ಬರುತ್ತಿಲ್ಲ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವರು ಅರಣ್ಯ ಇಲಾಖೆಯ ಬಗ್ಗೆ ಮಾತಾಡ್ತಾರೆ, ಗ್ರಾಮ ಪಂಚಾಯಿತಿಗಳ ಹೆಸರು ಬದಲಾವಣೆ ಮಾಡುವುದರಲ್ಲಿ ಬ್ಯುಸಿ ಇದಾರೆ. ಕೈಗಾರಿಕಾ ಸಚಿವರು ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ, ಗೃಹ ಸಚಿವರು ಆರ್ ಎಸ್ ಎಸ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ, ಸಾರಿಗೆ ಸಚಿವರು ಬಸ್ ನಲ್ಲಿ ತಿರುಗಾಡಿ ನಾಟಕ ಮಾಡ್ತಿದ್ದಾರೆ, ನೀರಾವರಿ ಸಚಿವರಿಗೆ ಖಾತೆಯಲ್ಲಿ ಆಸಕ್ತಿಯಿಲ್ಲ… ನಿಮ್ಮಲ್ಲೇ ನೂರಾರು ಸಮಸ್ಯೆಯಿದೆ.. ಬರ ಅಧ್ಯಯನಕ್ಕೆ ಯಾವಾಗ ಸಚಿವರು ಬರ್ತಾರೆ ಅಂತ ಜನ ಕಾಯ್ತಿದಾರೆ. ನೀವು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಯುಸಿ…ಜಿಲ್ಲೆಗಳಲ್ಲಿ ಸಚಿವರಿಲ್ಲ, ಕೆಡಿಪಿ ಸಭೆ ನಡೆದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಕೂಡಲೇ ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರ ಬದಿಗಿಟ್ಟು ಜನರ ಸಮಸ್ಯೆಗಳ ಬಗ್ಗೆ ಆಸಕ್ತಿವಹಿಸಿ. ಬರ ಪರಿಹಾರ ನೀಡಿ, 50 ಸಾವಿರ ಬರ ಪರಿಹಾರ ನೀಡಿ. ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಗಮನವಿದೆ, ಅಧ್ಯಯನ ತಂಡ ಬರೋವರೆಗಾದ್ರೂ ತಾತ್ಕಾಲಿಕವಾಗಿ ಪರಿಹಾರ ನೀಡಿ, ಅಧ್ಯಯನಕ್ಕೆ ಸಚಿವರನ್ನು ನೇಮಕ ಮಾಡಿ… ತಿಮ್ಮಪ್ಪ ನಿಮಗೆ ಒಳ್ಳೆಯ ಬುದ್ದಿ ನೀಡಲಿ ವಿಜಯೇಂದ್ರ ಹೇಳಿದ್ದಾರೆ.

About The Author