Haveri: ತಹಶೀಲ್ದಾರ್ ವಿರುದ್ಧ ಕೆಆರ್ಎಸ್ ಸೈನಿಕರಿಂದ ದೀರ್ಘದಂಡ ನಮಸ್ಕಾರ, ಪ್ರತಿಭಟನೆ

Haveri News: ಹಾವೇರಿ: ಹಿರೇಮನಕಟ್ಟಿ ಗ್ರಾಮದ ಕೆರೆ ಸಮಸ್ಯೆಗೆ ತಹಶೀಲ್ದಾರ್ ಸರಿಯಾಗಿ ಸ್ಪಂದನೆ ನೀಡದ ಕಾರಣ, ತಹಶೀಲ್ದಾರ್ ವಿರುದ್ಧ ಕೆಆರ್ಎಸ್ ಸೈನಿಕರು ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

ರಸ್ತೆಯಲ್ಲೇ ದೀರ್ಘದಂಡ ನಮಸ್ಕಾರ ಹಾಾಕಿದ ಅವರು, ತಹಶೀಲ್ದಾರಿ ಕಚೇರಿಯ ಮುಂದೆ ಧರಣಿ ಕುಳಿತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ ಮತ್ತು ಕೆಲ ಅಧಿಕಾರಿಗಳ ವಿರುದ್ಧ ರೈತರು ಮತ್ತು ಕೆ ಆರ್‌ಎಸ್ ಪಾರ್ಟಿ ಸದಸ್ಯರು ದೀರ್ಘದಂಡ ನಮಸ್ಕಾರ ಹಾಕಿ ಆಕ್ರೋಶಗೊಂಡಿದ್ದಾರೆ.

ಹಿರೇಮನಕಟ್ಟಿ ಕೆರೆ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ತಹಶೀಲ್ದಾರ್ ನಿರ್ಲಕ್ಷ್ಯ ತೋರಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಈ ಸಮಸ್ಯೆ ಬಗ್ಗೆ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಶಿಗ್ಗಾವಿ ತಹಶೀಲ್ದಾರ್ ಅವರಿಗೆ ತೀವ್ರ ಒತ್ತಾಯಿಸಿದ್ದಾರೆ.

ರೈತರಿಗೆ ಬೆಲೆ ಕೊಡದ ತಾಲೂಕಾ ದಂಡಾಧಿಕಾರಿ ಯಲ್ಲಪ್ಪ ಗೋಣೆಪ್ಪನವರ ಅವರು ರೈತ ಕಷ್ಟವನ್ನು ಕಣ್ಣಿಗೆ ಕಂಡರು ಕಾಣದಂತೆ ಸುಳ್ಳು ನೆಪ ಹೆಳಿಕೊಂಡು ಓಡಾಡುತ್ತಿದ್ದಾರೆ ಎಂದು ಪ್ರತಭಟನಾಕರರು ಆರೋಪಿಸಿದ್ದಾರೆ.

About The Author