Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ ಮೇಲೆ ಕೃಪೆ ತೋರುತ್ತಾಳೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ವೃಷಭ : ವೃಷಭ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ಸದಾ ಇರುತ್ತದೆ. ಏಕೆಂದರೆ, ಇವರು ಹಣವನ್ನು ಗೌರವಿಸುತ್ತಾರೆ. ಉಳಿತಾಯ ಮಾಡುವುದು, ಬುದ್ಧಿವಂತಿಕೆ ಉಪಯೋಗಿಸಿ, ಹೂಡಿಕೆ ಮಾಡುವುದು ಇತ್ಯಾದಿ ಕೆಲಸ ಮಾಡುತ್ತಾರೆ. ಹಾಗಾಗಿ ವೃಷಭ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ಸದಾ ಇರುತ್ತದೆ.
ಸಿಂಹ: ನಾಯಕತ್ವದ ಗುಣಕ್ಕೆ ಹೆಸರಾಗಿರುವ ಸಿಂಹ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ಸದಾ ಇರುತ್ತದೆ. ಏಕೆಂದರೆ, ಇವರು ಯಾರ ಹಂಗಲ್ಲೂ ಇರಲು ಇಚ್ಛಿಸುವುದಿಲ್ಲ. ಹಾಗಾಗಿ ಸ್ವಾಭಿಮಾನಿ ಜೀವನ ನಡೆಸುತ್ತಾರೆ. ಇವರ ಈ ಸ್ವಾಭಿಮಾನದ ಗುಣವೇ, ಇವರನ್ನು ಆರ್ಥಿಕವಾಗಿ ಸಧೃಡರನ್ನಾಗಿ ಮಾಡುತ್ತದೆ.
ಧನು: ಧನು ರಾಶಿಯವರು ಹೆಸರಿಗೆ ತಕ್ಕಂತೆ ಧನ-ಧಾನ್ಯಗಳ ಸಮಸ್ಯೆ ಇಲ್ಲದೇ ಬದುಕುವ ಜನ. ಕುಬೇರನ ಆಶೀರ್ವಾದ, ಲಕ್ಷ್ಮೀ ಕೃಪಾ ಕಟಾಕ್ಷ ಸದಾ ಇವರ ಮೇಲಿರುತ್ತದೆ. ಅಲ್ಲದೇ ಇವರು ಹಣ ಸಂಪಾದನೆ ಮಾಡುವುದರಲ್ಲಿ, ಉಳಿತಾಯ ಮಾಡುವುದರಲ್ಲಿ, ಹೂಡಿಕೆ ಮಾಡುವುದರಲ್ಲಿ ಎಲ್ಲದಲ್ಲೂ ಜಾಣರು. ಅಲ್ಲದೇ ಇವರು ಹಣವನ್ನು ಗೌರವಿಸುತ್ತಾರೆ. ಹಾಗಾಗಿ ಇವರಿಗೆ ಎಂದಿಗೂ ಆರ್ಥಿಕ ಸಮಸ್ಯೆ ಬರಲು ಸಾಧ್ಯವಿಲ್ಲ.
ಮಕರ: ನಿಶ್ಚಿಯಿಸಿದ ಕೆಲಸ ಮಾಡಿಯೇ ಮುಗಿಸುವ ರಾಶಿಯವರಲ್ಲಿ ಮಕರ ರಾಶಿಯವರು ಇದ್ದಾರೆ. ಇವರು ಶ್ರಮದಿಂದ, ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಕಾರಣ ಮಕರ ರಾಶಿಯವರು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಇವರು ಲಕ್‌ಗಿಂತ ಶ್ರಮದಲ್ಲಿ ಹೆಚ್ಚು ನಂಬಿಕೆ ಉಳ್ಳವರು.




