News: ಸತತ ಹತ್ಯೆ ಪ್ರಕರಣ: ಕಾಂಗ್ರೆಸ್ ಆಡಳಿತದ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ

News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಲಾವಣ್ಯ ಎಂಬ ಯುವತಿಯನ್ನು ಚೇತನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾನೆ. ಎಲ್ಲರೆದುರು ಬಂದು ಧೈರ್ಯವಾಗಿ ಈ ನೀಚ ಕೆಲಸ ಮಾಡಿರುವ ಅವನು, ಲಾವಣ್ಯಳ ರಕ್ಷಣೆಗೆ ಬರುತ್ತಿವರ ಬಳಿ ಮಚ್ಚು ಬೀಸಿ, ಅವರೂ ದೂರ ಹೋಗುವಂತೆ ಮಾಡಿದ್ದಾನೆ.

ಅಲ್ಲದೇ ಈ ನೀಚ ಕೃತ್ಯ ಮಾಡಿ, ಪೋಲೀಸರು ಸ್ಥಳಕ್ಕೆ ಬರುವುದಕ್ಕೂ ಮುನ್ನ ಅಲ್ಲಿಂದ ಪರಾರಿಯಾಗಿದ್ದಾನೆ. ಮತ್ತು ಸ್ಥಳೀಯ ಪೋಲೀಸರು ಇದೀಗ ಆತನನ್ನು ಕಾರು ಸಮೇತ ಬಂಧಿಸಿದ್ದಾರೆ. ರಾಜ್ಯದಲ್ಲಿ ಇಂಥ ಪರಿಸ್ಥಿತಿ ಬಂದಿರಲು ಬಿಜೆಪಿ ನಾಯಕರು ಕಾಂಗ್ರೆಸ್ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸಿ.ಟಿ.ರವಿ, ಮೊನ್ನೆ ಕಾನೂನು ವಿದ್ಯಾರ್ಥಿನಿ ಅಮೃತಾ ಹತ್ಯೆ, ನಿನ್ನೆ ಬಂಟ್ವಾಳದಲ್ಲಿ ಲಾವಣ್ಯ ಬರ್ಬರ ಕೊಲೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ಇದು ನೇರ ಸಾಕ್ಷಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಭೀಕರ ಕೃತ್ಯಗಳು ಹಗಲು ಹೊತ್ತಿನಲ್ಲೇ ನಡೆಯಬೇಕಾದರೆ ಕ್ರಿಮಿನಲ್‌ಗಳಿಗೆ ಪೊಲೀಸರ ಅಥವಾ ಕಾನೂನಿನ ಭಯ ಎಲ್ಲಿದೆ? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಕರ್ನಾಟಕದ ಕಾನೂನು ಸುವ್ಯವಸ್ಥೆ ಎಲ್ಲಿಗೆ ತಲುಪಿದೆ ಎಂಬುದನ್ನೊಮ್ಮೆ ನೋಡಿ ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಕನಿಷ್ಠ ಸುರಕ್ಷತೆಯೂ ಇಲ್ಲದಂತಹ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ, ವಿದ್ಯಾಭ್ಯಾಸಕ್ಕೆಂದು ಹೊರ ಹೋದ ಮಗಳು ಸಂಜೆಯೊಳಗೆ ಮನೆಗೆ ಸುರಕ್ಷಿತವಾಗಿ ಮರಳುತ್ತಾಳೆ ಎನ್ನುವ ಭರವಸೆಯನ್ನು ಈ ಸರ್ಕಾರ ಸಂಪೂರ್ಣವಾಗಿ ಕಸಿದುಕೊಂಡಿದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡದೆ, ಅತ್ಯಂತ ಕಠಿಣ ಕಾನೂನು ಶಿಕ್ಷೆಯಾಗುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಆಗಿದ್ದೇನು..?

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಲಾವಣ್ಯ ಎಂಬ ಯುವತಿಯ ಮೇಲೆ ಆಕೆಯದ್ದೇ ದೂರದ ಸಂಬಂಧಿಯಾಗಿದ್ದ ಚೇತನ್ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ.

ಲಾವಣ್ಯಾ ಬಂಟ್ವಾಳದ ಕಕ್ಯಪದವು ನಿವಾಸಿಯಾಗಿದ್ದು, ಈಕೆ ಕಲ್ಲಡ್ಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ದೂರದ ಸಂಬಂಧಿಯಾಗಿದ್ದ ಚೇತನ್ ಬೆಳ್ತಂಗಡಿಯಲ್ಲಿ ವಾಸ ಮಾಡುತ್ತಿದ್ದ. ಚೇತನ್ ಲಾವಣ್ಯಳನ್ನು ಪ್ರೀತಿಸುತ್ತಿದ್ದ. ಆದರೆ ಲಾವಣ್ಯ ಚೇತನ್ ಪ್ರೀತಿಯನ್ನು ನಿರಾಕರಿಸಿದ್ದಳು. ಎಷ್ಟೇ ಹೇಳಿದರೂ, ತಾನು ಚೇತನ್‌ನನ್ನು ಪ್ರೀತಿಸುವುದಿಲ್ಲ ಎಂದು ಹೇಳಿದ್ದಳಂತೆ. ಹೀಗಾಗಿ ಇದು 1 ಸೈಡ್ ಲವ್ ಆಗಿತ್ತು.

ಇದೇ ದ್ವೇಷಕ್ಕೇ ಚೇತನ್ ನಿನ್ನೆ ಬಿ.ಸಿ.ರೋಡ್‌ನಲ್ಲಿರುವ ಬಸ್ ನಿಲ್ದಾಣದಲ್ಲಿ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ಲಾವಣ್ಯ ಮೇಲೆ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾನೆ. ಲಾವಣ್ಯ ಬಸ್‌ನಲ್ಲಿ ಹೋಗಿ ಕುಳಿತಿದ್ದು, ಆಕೆಯ ಪಕ್ಕವೇ ಹೋಗಿ ಚೇತನ್ ಕುಳಿತಿದ್ದಾನೆ. ಹೀಗಾಗಿ ಆಕೆ ತನ್ನ ಸಂಬಂಧಿಕರಿಗೆ ಕಾಲ್ ಮಾಡಿ, ಚೇತನ್ ಪಕ್ಕದಲ್ಲೇ ಬಂದು ಕುಳಿತಿದ್ದಾನೆ. ನನಗೆ ಹೆದರಿಕೆಯಾಗುತ್‌ತಿದೆ ಎಂದಿದ್ದಾಳೆ.

ಬಳಿಕ ಕಾಲ್ ಕಟ್ ಮಾಡಿದ್ದು, ಪುನಃ ಸಂಬಂಧಿಕರು ಕಾಲ್ ಮಾಡಿದರೂ, ಆಕೆ ರಿಸೀವ್ ಮಾಡಲಿಲ್ಲ. ಆಗ ಸಂಬಂಧಿಕರು ಲಾವಣ್ಯಾಳ ಪೋಷಕರಿಗೆ ಕಾಲ್ ಮಾಡಿ, ವಿಷಯ ತಿಳಿಸಿದ್ದಾರೆ. ಆದರೆ ಅದಾಗಲೇ, ಲಾವಣ್ಯ ಬಸ್‌ನಿಂದ ಇಳಿದು ಓಡಲು ಪ್ರಯತ್ನಿಸಿದ್ದು, ಆಕೆಯನ್ನು ಅಟ್ಟಿಸಿದ ಚೇತನ್, ಮಚ್ಚಿನಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ.

ಅಲ್ಲೇ ಇದ್ದ ಸ್ಥಳೀಯರು ಲಾವಣ್ಯಳನ್ನು ಕಾಪಾಡಲು ಬಂದಾಗ, ಅವರೆಡೆಯೂ ಚೇತನ್ ಮಚ್ಚು ಬೀಸಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಪೋಲೀಸರು ಮತ್ತು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಚೇತನ್ ಓಡಿ ಹೋಗಿದ್ದಾನೆ. ಲಾವಣ್ಯಳನ್ನು ಆಸ್ಪತ್ರೆಗೆ ಕರೆದ“ಯ್ಯುವ ಪ್ರಯತ್ನ ನಡೆಯಿತಾದರೂ, ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕ“ಂಡಿರುವ ಪೋಲೀಸರು ಆರೋಪಿ ಚೇತನ್‌ನನ್ನು ಇಂದು ಬಂಧಿಸಿದ್ದಾರೆ.

About The Author