Spiritual: ಇದೀಗ ಆಷಾಢ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಶುರುವಾಗುತ್ತದೆ. ಅಲ್ಲಿಗೆ ಹಬ್ಬಗಳ ಸಂಭ್ರಮ ಶುರುವಾಗುತ್ತದೆ. ಹಾಗಾಗಿ ಇಂದು ಶ್ರೀನಿವಾಸ ಗುರೂಜಿ, ಶ್ರಾವಣ ಮಾಸದ ಶ್ರೇಷ್ಠ ಹಬ್ಬವಾದ ನಾಗರ ಪಂಚಮಿ ಆಚರಣೆ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ನಾಗಪಂಚಮಿಯನ್ನು ಪ್ರಾತಃಕಾಲದಲ್ಲಿ ಮಾಡಬೇಕು. ನಾಗರಕಟ್ಟೆಗಳಿಗೆ ಹೋಗಿ ಅಲ್ಲಿ ಪೂಜೆ ಮಾಡುವುದು ಉತ್ತಮ ಅಂತಾರೆ ಶ್ರೀನಿವಾಸ್ ಗುರೂಜಿ. ಈ ವೇಳೆ ನಾಗನಿಗೆ ಎಳ್ಳುಂಡೆ, ಹಾಲು, ಬೆಣ್ಣೆ, ತುಪ್ಪ, ಮೊಸರು ಇವೆಲ್ಲವನ್ನೂ ನೈವೇದ್ಯ ಮಾಡಬೇಕು.
ಇನ್ನು ನಾಗನಿಗೆ ಪೂಜೆ ಮಾಡಿರುವ ರಕ್ಷಾದಾರವನ್ನು ಮನೆಯಲ್ಲಿರುವ ಎಲ್ಲರಿಗೂ ಕಟ್ಟುವುದು ಉತ್ತಮ. ಅದರಿಂದ ನಮಗೆಲ್ಲ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಪೂಜೆ ಮಾಡುವುದಾದರೆ, ಸ್ನಾನಾದಿಗಳನ್ನು ಮಾಡಿ, ಮಡಿಯಿಂದ ಪೂಜೆ ಮಾಡಬೇಕು. ಉಪವಾಸ ಮಾಡುವುದು ಕೂಡ ತುಂಬಾ ಉತ್ತಮ. ಅಲ್ಲದೇ ಪ್ರಾತಃಕಾಲ ಮತ್ತು ಸಂಜೆ ವೇಳೆ ಮಾತ್ರ ಪೂಜೆ ಮಾಡಬಹುದು. ಮಧ್ಯಾಹ್ನ ಪೂಜೆ ನಿಷಿದ್ಧ. ಅಲ್ಲದೇ ನೀವು ರಕ್ಷಾದಾರ ಕಟ್ಟಿದಾಗ, ನೀವು ಮಾಂಸಾಹಾರ, ತತ್ತಿ , ಮದ್ಯಪಾನ ಎಲ್ಲದರ ಸೇವನೆ ಬಿಡಬೇಕು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




