Bidar News: ಬೀದರ್‌ನ ಖಾನ್ ಚಾಚಾ ಇಕೋ ವ್ಯಾನ್ ಡಿಕ್ಕಿಯಾಗಿ ಇನ್ನೋರ್ವ ವ್ಯಕ್ತಿ ಸಾ*ವು

Bidar News: ಬೀದರ್: ಬೀದರ್‌ನಲ್ಲಿ ಓರ್ವ ವ್ಯಕ್ತಿ ಅಪಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೀದರ್‌್ನ ಮಹಾವೀರ ವೃತ್ತದ ಬಳಿ ಈ ಭೀಕರ ಘಟನೆ ನಡೆದಿದ್ದು, ಬೀದರ್ ನ ಖಾನ್ ಚಾಚಾ ಹೋಟೆಲ್ ವಾಹನ ಹರಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

48 ವರ್ಷದ ಸಂತೋಷ್ ಜಾಪುರೆ ಎಂಬುವವರು ಸಾವನ್ನಪ್ಪಿದವರಾಗಿದ್ದು, 4 ತಿಂಗಳ ಅಂತರದಲ್ಲಿ ಖಾನ್ ಚಾಚಾ ವಾಹನ ಎರಡನೇ ವ್ಯಕ್ತಿಯನ್ನು ಬಲಿ ಪಡೆದ ಆರೋಪವಿದೆ. ಈ ಮುನ್ನ ಓರ್ವ ವ್ಯಕ್ತಿ ಇದೇ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ್ದರು. ಇದೀಗ ಸಂತೋಷ್ ಅವರು ಈ ವಾಹನದಿಂದ ಅಪಘಾತವಾಗಿ ಸಾವನ್ನಪ್ಪಿದ್ದಾರೆ.

ಖಾನ್ ಚಾಚಾ ಇಕೋ ವ್ಯಾನ್ ರಾಂಗ್‌ ರೂಟ್‌ನಲ್ಲಿ ಬಂದು, ಸಂತೋಷ್‌ಗೆ ಡಿಕ್ಕಿಯಾಗಿದೆ. ಆ ರಭಸಕ್ಕೆ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂತೋಷ್ ಜಾಪುರೆ ಬೀದರ್ ನಗರದ ಸಾಯಿ ಕಾಲೋನಿ ನಿವಾಸಿಯಾಗಿದ್ದು, ಹೋಟೆಲ್ ಮಾಲೀಕರ ನಿರ್ಲಕ್ಷದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿ, ನ್ಯಾಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.

About The Author