Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದು, ಯಾರ್ರೀ ಅವ್ನು ಪ್ರಿಯಾಂಕ್ ಖರ್ಗೆ..?ಆ ಮನುಷ್ಯನಿಗೆ ತಾಕತ್ ಇದ್ರೆ ಇಂದು ಬೆಂಗಳೂರಿನಲ್ಲಿ ಏನು ನಡೆದಿದೆ ಎಂದು ನೋಡಲಿ. ವಿದ್ಯಾರ್ಥಿಗಳು ಹೋರಾಟದ ನೆಪದಲ್ಲಿ ಉಮರ್ ಖಾಲಿದ್ ಸೇರಿ ಹಲವು ಉಗ್ರರಿಗೆ ಜಿಂದಾಬಾಾದ್ ಎಂದು ಹೇಳುತ್ತಿದ್ದಾರೆ. ಈ ನಾಲಾಯಕ್ ಗೃಹಸಚಿವ ಎಲ್ಲಿ ಮಲ್ಕೋಂಡಿದ್ದಾನೆ ಅಂತಾ ಕೇಳಿ ಎಂದು ಏಕವಚನದಲ್ಲೇ ವಿಜಯೇಂದ್ರ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂಥ ಬೆಂಕಿ ಹಚ್ಚುವ ಕೆಲಸಕ್ಕೆ ಬೇರೆ ಯಾರೂ ಬೇಡಾ, ಪ್ರಿಯಾಂಕ್ ಖರ್ಗೆಯಂಥವರು ಇನ್ನಿಬ್ಬರು ಇದ್ದರೆ ಸಾಕು ಈ ದೇಶದಲ್ಲಿ. ಗೃಹಸಚಿವರಾಗಿ ಜವಾಬ್ದಾರಿಯಿಂದ ಇರುವುದನ್ನು ಕಲಿಯಲಿ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕಾಂಗ್ರೆಸ್ ಗೆಲುವೂ ಅಲ್ಲ, ಸಿಜೆಪಿ ಗೆಲುವು ಅಲ್ಲ. ದೇಶದ ಭವಿಷ್ಯ ರೂಪಿಸುವ ಯುವಶಕ್ತಿಗಳಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂದು ಪ್ರಧಾನ್ ಜವಾಬ್ದಾರಿಯಿಂದ ರಾಜೀನಾಮೆ ನೀಡಿದ್ದಾರೆಂದು ವಿಜಯೇಂದ್ರ ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ಕೆಲವೇ ವಾರಗಳಾಗಿವೆ. ಅಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಭಯ ಹಾಗೂ ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಎಂಬದನ್ನ ನಾನು ಪ್ರಶ್ನಿಸಲು ಹೋಗುವುದಿಲ್ಲ. ಪಾಪ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ ನೋವು ಅವರಲ್ಲಿ ಇನ್ನೂ ಮಾಸಿದಂತೆ ಕಾಣುತ್ತಿಲ್ಲ.
ವಿಜಯೇಂದ್ರ ನನಗಿಂತ ಮೂರ್ನಾಲ್ಕು ವರ್ಷ ಹಿರಿಯರಾಗಿರಬಹುದು. ಆದರೆ ವಯಸ್ಸಿನಲ್ಲಿ ಹಿರಿಯನಾದ ತಕ್ಷಣ ಬಾಯಿಗೆ ಬಂದಂತೆ ಮಾತಾಡುವ ಪರವಾನಗಿ ಸಿಕ್ಕಂತಲ್ಲ. ನಿಷ್ಪ್ರಯೋಜಕ ಅಥವಾ ಅಸಮರ್ಥ ಎಂದು ಕೈಲಾಗದ ವಿರೋಧ ಪಕ್ಷದಿಂದ ಟೀಕೆ ಕೇಳುವುದು POCSO ಪ್ರಕರಣದ ಆರೋಪಿ ಆಗಿರುವುದಕ್ಕಿಂತ ಸಾವಿರ ಪಟ್ಟು ಮೇಲು ಎಂದು ನಾನು ಭಾವಿಸುತ್ತೇನೆ. ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂಬ ವಾಸ್ತವಕ್ಕೆ ತಾವೂ ಸಾಕ್ಷಿಯಾಗುತ್ತಿರುವಂತಿದೆ. ಮಾತುಗಳಿಗೆ ಸ್ವಯಂ ಮಿತಿ ಇರಬೇಕು. ಇಲ್ಲವಾದರೆ ಹೇಗೆ ಮಾತನಾಡಬೇಕೆಂಬುದನ್ನ ಕಲಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.




