Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿಕೆ ನೀಡುವಾಗ, ದೇಶದಲ್ಲಿ “ವಿದ್ಯಾರ್ಥಿಗಳು” ಮತ್ತು “ಈಡಿಯಟ್‌ಗಳು, ಅಂಧಭಕ್ತರು” ಎಂಬ ಎರಡೇ ವರ್ಗಗಳಿವೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ಸೇರಿ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್‌ತಪಡಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿ.ವೈ.ವಿಜೇಯಂದ್ರ, ದೇಶದ 55 ಕೋಟಿ ಜನರನ್ನು ‘ಮೂರ್ಖರು’ ಎಂದ ನಾಯಕನ ನೈತಿಕತೆ ಏನು? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಕಿಡಿಕಾರಿರುವ ವಿಜಯೇಂದ್ರ, ದೇಶದಲ್ಲಿ “ವಿದ್ಯಾರ್ಥಿಗಳು” ಮತ್ತು “ಈಡಿಯಟ್‌ಗಳು, ಅಂಧಭಕ್ತರು” ಎಂಬ ಎರಡೇ ವರ್ಗಗಳಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿದ್ದಾರೆ. ಅಂದರೆ, ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿ NDA ಸರ್ಕಾರಕ್ಕೆ ಮತ ನೀಡಿದ ದೇಶದ 38% ಜನರು—ಅಂದರೆ ಸುಮಾರು 55 ಕೋಟಿ ಭಾರತೀಯರು—ಈಡಿಯಟ್‌ಗಳು ಮತ್ತು ಅಂಧಭಕ್ತರೇ? ಎಂದು ಪ್ರಶ್ನಿಸಿದ್ದಾರೆ.
ಎರಡು ಭಿನ್ನ ಮನಸ್ಥಿತಿಗಳು: ಒಂದೆಡೆ, ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತನ್ನು ಪ್ರವೇಶಿಸುವಾಗ ಅದರ ಮೆಟ್ಟಿಲಿಗೆ ಹಣೆ ಹಚ್ಚಿ ನಮಸ್ಕರಿಸಿ ಒಳಗೆ ಹೋದ ಪ್ರಧಾನಿ ನರೇಂದ್ರ ಮೋದಿ . ಇನ್ನೊಂದೆಡೆ, ಜನಾದೇಶ ತಮ್ಮ ಪರವಾಗಿ ಬರಲಿಲ್ಲ ಎಂಬ ಕಾರಣಕ್ಕೆ ಕಷ್ಟದ ಸಮಯದಲ್ಲಿ ವಿದೇಶಕ್ಕೆ ತೆರಳಿ, ಈಗ ಬಂದು ದೇಶದ ಕೋಟ್ಯಂತರ ಜನರನ್ನು ಬಹಿರಂಗವಾಗಿ ನಿಂದಿಸುತ್ತಿರುವ ರಾಹುಲ್ ಗಾಂಧಿ ಎಂದು ರಾಹುಲ್ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶ್ನಿಸಬೇಕಾದದ್ದು ಅವರ ನೈತಿಕತೆಯನ್ನು! ವಿದೇಶಿ ನೆಲದಲ್ಲಿ ನಿಂತು ಸ್ವದೇಶವನ್ನು ಟೀಕಿಸುವುದು, ಸೇನಾ ಪಡೆಗಳಿಂದ ಹಿಡಿದು ಸಾಂಸ್ಕೃತಿಕ ವೇದಿಕೆಗಳವರೆಗೆ ಪ್ರತಿಯೊಂದರಲ್ಲೂ ರಾಜಕೀಯ ಹುಡುಕುವುದು, ಮತ್ತು ಮಾಡಿದ ಆರೋಪಗಳನ್ನು ಸಾಬೀತುಪಡಿಸಲಾಗದೇ ನ್ಯಾಯಾಲಯಗಳಲ್ಲಿ ಕ್ಷಮೆ ಕೋರುವುದು—ಇದು ಯಾರ ರಾಜಕೀಯ ಶೈಲಿ?
ಭಾರತವನ್ನು ವಿಶ್ವಮಟ್ಟದಲ್ಲಿ ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವೈಖರಿಯನ್ನು ಟೀಕಿಸಲು ಈ ನಾಯಕರಿಗೆ ಯಾವ ಅರ್ಹತೆ ಇದೆ? 12 ವರ್ಷಗಳಿಂದ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ಸಾಲು ಸಾಲು ಚುನಾವಣೆಗಳಲ್ಲಿ ತಿರಸ್ಕರಿಸಿದ್ದಾರೆ. ಸತತ ಮೂರು ಬಾರಿ ಸ್ಪಷ್ಟ ಜನಾದೇಶ ಪಡೆದು ಸರ್ಕಾರ ನಡೆಸುತ್ತಿರುವ ನಾಯಕತ್ವವನ್ನು ಮತ್ತು ಅವರಿಗೆ ಮತ ನೀಡಿದ ಜನರನ್ನು ನಿಂದಿಸುವುದೇ ರಾಜಕೀಯವಾದರೆ… ನಿಜವಾದ ‘ಈಡಿಯಟ್’ ಯಾರು ಎಂಬುದನ್ನು ದೇಶದ ಜನ ಈಗಾಗಲೇ ನಿರ್ಧರಿಸಿದ್ದಾರೆ! ಎಂದು ರಾಹುಲ್ ವಿರುದ್ಧ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.




