Political News: ಸಿದ್ದರಾಮಯ್ಯ ಪಾಪ ಬಹಳ ಅತ್ಯಂತ ಸ್ವಚ್ಛ ರಾಜಕಾರಣಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲು ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯವರಾಗಿದ್ದರು. ಆದರೆ ಈಗ ಕಲುಷಿತರಾಗಿದ್ದಾರೆ, ಅವರ ಮಗ ಮಾಡಿದ ಕರ್ಮಕಾಂಡದಿಂದ ಅವರು ಕಲುಷಿತರಾಗಿದ್ದಾರೆ ಎಂದರು.
ಸಿದ್ದರಾಮಯ್ಯ ಕಲುಷಿತಗೊಳ್ಳಲು ಅವರ ಮಗ ಮತ್ತು ಭೈರತಿ ಸುರೇಶ್ ಕಾರಣ ಎಂದು ಯತ್ನಾಳ್ ಆರೋಪಿಸಿದ್ದಾರೆ. ಜಾತಿ ವ್ಯವಸ್ಥೆ, ಬಾಯಿತೆರೆದ್ರೆ ಅಲ್ಪ ಸಂಖ್ಯಾತರಿಗೆ ಅಷ್ಟು ಕೋಟಿ, ಇಷ್ಟು ಕೋಟಿ ಎಂದು ಹೇಳ್ತಾರೆ, ಅವರಿಗೆ ದಲಿತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ, ತಮ್ಮ ಸಮುದಾಯಕ್ಕೆ ಅವರು ಹೆಚ್ಚಿನದಾಗಿ ಏನು ಮಾಡಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸಂಪೂರ್ಣವಾಗಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯಬೇಕು. ಕಾಂಗ್ರೆಸ್ ಮಣ್ಣಾಗಬೇಕು ಎಂದಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ, ರಾಜ್ಯದಲ್ಲಿ 4. 80 ಲಕ್ಷ ಹುದ್ದೆಗಳು ಖಾಲಿಯಿವೆ, KPSC ಹಗರಣ ಸಂಬಂಧ ಮೊದಲು ಡಿ.ಕೆ ಶಿವಕುಮಾರ್ ರಾಜಿನಾಮೆ ನೀಡಬೇಕು. KPSC ಯನ್ನು ಮೊದಲು ವಿಸರ್ಜನೆ ಮಾಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ನರಸತ್ತಿದೆ. ಪಕ್ಷಕ್ಕೆ ಧಮ್ ಇಲ್ಲ. ಇದರಿಂದ ಕಾಂಗ್ರೆಸ್ ನವರಿಗೆ ವಿರೋಧ ಪಕ್ಷಗಳ ಬಗ್ಗೆ ಯಾವುದೇ ಭಯವಿಲ್ಲ. ವಿಜಯೇಂದ್ರನ ಕ್ಯಾಂಡಿಡೇಟ್ ಒಬ್ಬ 2 ಕೋಟಿ ಹಣ ಕೊಟ್ಟು KPSC ನಲ್ಲಿ ಕೆಲಸ ತೆಗೆದುಕೊಂಡಿರುವುದು ಬಹಿರಂಗ ಸತ್ಯವಾಗಿದೆ. ಪ್ರತಾಪ್ ಸಿಂಹನನ್ನು ಮೂಲೆಗುಂಪು ಮಾಡಿದ್ದಾರೆ. ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ ಎಂಬುದನ್ನು ಇದುವರೆಗೆ ತಿಳಿಸಿಲ್ಲ ಎಂದರು.
ಪಕ್ಷಕ್ಕೆ ದುಡಿದವರಿಗಲ್ಲ ರಾತ್ರಿ ಯಾರು ಸೂಟ್ ಕೇಸ್ ತಗೊಂಡು ಹೋಗಿ ಕೊಡ್ತಾರೋ ಅವರಿಗೆ ಟಿಕೆಟ್ ಇಲ್ಲ ಎಂದರು. KPSC ಅಧ್ಯಕ್ಷರ ಮನೆಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಫೋಟೋ ಇದೆ, ದೇಶದ ಹೋರಾಟಗಾರರ ಯಾವುದೇ ಫೋಟೋ ಇಲ್ಲ,ವಿಜಯೇಂದ್ರ ಎಲ್ಲಾದ್ರೂ ಬಾಯಿ ಬಿಟ್ಟಿದ್ದಾನಾ.ಅಂತ ಭ್ರಷ್ಟನನ್ನ ಮೇಲಿನವರು ಹೇಗೆ ರಾಜ್ಯಾಧ್ಯಕ್ಷ ನನ್ನಾಗಿ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಗುತ್ತಿಗೆ ತಗೊಂಡಿದ್ದಾನಾ ಎಂದು ಪ್ರಶ್ನಿಸಿದ್ದಾರೆ.




