ಬೆಳಿಗ್ಗೆ ಎದ್ದ ತಕ್ಷಣ ದೇವರನ್ನ ಏಕೆ ನೆನೆಯಬೇಕು ಗೊತ್ತಾ..?

ರಾತ್ರಿ ಉತ್ತಮ ನಿದ್ದೆಯಾದರೆ, ನಮ್ಮ ದಿನ ಉಲ್ಲಸಿತವಾಗಿ, ಆನಂದದಾಯಕವಾಗಿ ಇರುತ್ತದೆ. ಎಲ್ಲ ಕೆಲಸವನ್ನ ಖುಷಿ ಖುಷಿಯಾಗಿ ಮಾಡಲು ಅನುಕೂಲವಾಗುತ್ತದೆ. ಹಿರಿಯರು ಹೇಳುವುದೇನೆಂದರೆ, ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ನಮ್ಮ ದಿನ ಪ್ರಾರ್ಭಿಸಬೇಕಂತೆ. ಈ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಆದ್ರೆ ಬೆಳಿಗ್ಗೆ ಎದ್ದ ಬಳಿಕ ದೇವರನ್ನ ನೆನೆಯಲುಕಾರಣವೇನು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಮೊದಲನೇಯದಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎಳುವುದರಿಂದ ಅದು ನಿಮ್ಮನ್ನು ಯಶಸ್ಸಿನ ದಾರಿಗೆ ಕೊಂಡೊಯ್ಯುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಆರೋಗ್ಯಾಭಿವೃದ್ಧಿಯಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಮನುಷ್ಯ ಏಳದಿದ್ದರೆ, ಅವನು ಬಡತನಕ್ಕೆ ಆಹ್ವಾನಿಸಿದಂತೆ ಎಂಬ ಮಾತಿದೆ.

ಬೆಳಿಗ್ಗೆ ಎದ್ದ ತಕ್ಷಣ ದೇವರನ್ನು ನೆನೆಯಲು ಹಲವು ಕಾರಣಗಳಿದೆ. ಇದು ವೈಜ್ಞಾನಿಕವಾಗಿಯೂ ಉತ್ತಮ ಎನ್ನಲಾಗಿದೆ. ಬೆಳಿಗ್ಗೆ ಎಳುವಾಗ ನಾವು ಬಲಬದಿಯಿಂದ ಏಳಬೇಕು. ಎದ್ದು ಮಂಚದ ಮೇಲೆ ಸ್ವಲ್ಪ ಹೊತ್ತು ಕುಳಿತು, ನಮ್ಮ ಕೈ ನೋಡಿಕೊಂಡು, ಕರಾಗ್ರೆ ವಸತೆ ಲಕ್ಷ್ಮೀ ಎಂಬ ಶ್ಲೋಕ ಪಠಿಸಬೇಕು, ನಂತರ ಭೂಮಿಗೆ ಕಾಲು ತಾಕಿಸುವಾಗ, ಸಮುದ್ರ ವಸನೆ ದೇವಿ ಎಂಬ ಶ್ಲೋಕ ಹೇಳಿ, ಭೂಮಿಗೆ ನಮಿಸಿ, ನಂತರ ನಿಮ್ಮ ದಿನ ಶುರು ಮಾಡಬೇಕು.

ಇದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಬೆಳಿಗ್ಗೆ ಧಿಡೀರನೇ ಎದ್ದು ನಡೆದಾಡಿ ಬಿಟ್ಟರೆ, ರಕ್ತನಾಳದಲ್ಲಿ ಏರುಪೇರಾಗಿ, ಹೃದಯ ಸಮಸ್ಯೆ ಉಂಟಾಗುತ್ತದೆ. ನಾವು ಮಲಗಿದಾಗ, ನಮ್ಮ ದೇಹದಲ್ಲಿರುವ ಭಾಗಗಳು ಕೂಡ ವಿಶ್ರಾಂತಿಯಲ್ಲಿರುತ್ತದೆ. ಅದೂ ಕೂಡ ಆ್ಯಕ್ಟೀವ್ ಆಗಲು ಕೆಲ ಸಮಯ ತಗಲುತ್ತದೆ. ಹಾಗಾಗಿ ಧಿಡೀರನೇ ಎದ್ದೇಳಬಾರದು. ಆದ್ದರಿಂದಲೇ ಎದ್ದ ತಕ್ಷಣ ಶ್ಲೋಕ ಹೇಳಬೇಕು ಎನ್ನಲಾಗಿದೆ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author