Hubli News: ಕರ್ನಾಟಕ ಬಂದ್ಗೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ. ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಆಟೋ ಚಾಲಕರು, “ಬಂದ್ ಇಲ್ಲ, ಹುಬ್ಬಳ್ಳಿ ಬಂದ್ ಇಲ್ಲ” ಎಂದು ಘೋಷಣೆ ಕೂಗಿದ್ದಾರೆ. ಪ್ರಯಾಣಿಕರಿಗೆ ಹೂ ನೀಡಿ ಬಂದ್ ಇಲ್ಲ ಎಂದು ಸಂದೇಶ ನೀಡಿದ್ದಾರೆ.
ಕರ್ನಾಟಕ ಬಂದ್ಗೆ ವಿರೋಧಿಸಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಂದ್ಗೆ ವಿರೋಧ ವ್ಯಕ್ತಪಡಿಸಿದ ಆಟೋ ಚಾಲಕರು, ಹುಬ್ಬಳ್ಳಿಯಲ್ಲಿ ಎಂದಿನಂತೆ ಆಟೋ ಸಂಚಾರ ಮುಂದುವರಿಯಲಿದೆ ಎಂದು ಘೋಷಿಸಿದರು.
ಪ್ರತಿಭಟನೆ ವೇಳೆ “ಬಂದ್ ಇಲ್ಲ, ಹುಬ್ಬಳ್ಳಿ ಬಂದ್ ಇಲ್ಲ” ಎಂದು ಘೋಷಣೆ ಕೂಗಿದ ಚಾಲಕರು, ಸಾರ್ವಜನಿಕರಿಗೆ ಬಂದ್ನಿಂದ ಯಾವುದೇ ತೊಂದರೆಯಾಗಬಾರದು ಎಂದು ಮನವಿ ಮಾಡಿದರು.
ಇದೇ ವೇಳೆ ಆಟೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಹೂ ನೀಡಿ, “ಬಂದ್ ಇಲ್ಲ” ಎಂಬ ಸಂದೇಶವನ್ನು ನೀಡಿದರು. ಪ್ರಯಾಣಿಕರು ತಮ್ಮ ದೈನಂದಿನ ಓಡಾಟವನ್ನು ಯಾವುದೇ ಆತಂಕವಿಲ್ಲದೆ ಮುಂದುವರಿಸಬಹುದು ಎಂದು ತಿಳಿಸಿದರು.
ಕಾವೇರಿ ಸೇರಿದಂತೆ ರಾಜ್ಯದ ನೀರಿನ ಸಮಸ್ಯೆಗಳ ಹೋರಾಟಕ್ಕೆ ನೈತಿಕ ಬೆಂಬಲವಿದೆ. ಆದರೆ ಬಂದ್ನಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ವಿರೋಧಿಸುತ್ತೇವೆ ಎಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯರು ತಿಳಿಸಿದ್ದಾರೆ.




