LPG ಗ್ರಾಹಕರಿಗೆ ಕೊನೆ ಅವಕಾಶ -ಆಗಸ್ಟ್ 23ರೊಳಗೆ ಈ ಕೆಲಸ ತಪ್ಪದೇ ಮಾಡಿ

ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಇಲ್ಲೊಂದು ಬಿಗ್ ಗುಡ್‌ನ್ಯೂಸ್ ಸಿಕ್ಕಿದೆ. ಈಗಾಗಲೇ ಮುಕ್ತಾಯವಾಗಬೇಕಿದ್ದ ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ ಗಡುವನ್ನು ತೈಲ ಕಂಪನಿಗಳು ಆಗಸ್ಟ್ 23ರವರೆಗೆ ವಿಸ್ತರಿಸಿ ಎಂದು ಆದೇಶ ಹೊರಡಿಸಿವೆ. ಸರ್ವರ್ ಸಮಸ್ಯೆ ಹಾಗೂ ಹಲವು ತಾಂತ್ರಿಕ ತೊಂದರೆಗಳಿಂದಾಗಿ ಗ್ರಾಹಕರು ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಾಸ್ತವವಾಗಿ ಇ-ಕೆವೈಸಿ ಮಾಡಲು ಆಗಸ್ಟ್ 16 ಕೊನೆಯ ದಿನವಾಗಿತ್ತು. ಆದರೆ ಆಧಾರ್ ಮೂಲಕ ಇ-ಕೆವೈಸಿ ಮಾಡಲು ಹೋದಾಗ ಸರ್ವರ್ ಪ್ರಾಬ್ಲಮ್, ಆ್ಯಪ್‌ಗಳು ಹಾಗೂ ಪೋರ್ಟಲ್‌ಗಳು ಸರಿಯಾಗಿ ಕೆಲಸ ಮಾಡದೆ ಗ್ರಾಹಕರು ಕಂಗಾಲಾಗಿದ್ದರು. ಇದರಿಂದ ಗ್ಯಾಸ್ ಏಜೆನ್ಸಿಗಳ ಕಚೇರಿಗಳ ಮುಂದೆ ಜನರು ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿತ್ತು.

ಜನರ ಈ ಕಷ್ಟವನ್ನು ಪರಿಗಣಿಸಿರುವ ತೈಲ ಕಂಪನಿಗಳು, ಗಡುವನ್ನು ಆಗಸ್ಟ್ 23ರವರೆಗೆ ವಿಸ್ತರಿಸಿದ್ದು, ಗ್ಯಾಸ್ ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ ತಪ್ಪದೇ ಈ ಅವಧಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸಬೇಕು ಎನ್ನಲಾಗ್ತಿದೆ. ಈ ಪ್ರಕ್ರಿಯೆಯನ್ನು ಮಾಡುವುದು ತುಂಬಾ ಸಿಂಪಲ್! ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ಇ-ಕೆವೈಸಿ ಕೆಲಸವನ್ನು ಪೂರ್ಣಗೊಳಿಸಬಹುದು. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ.

ಗ್ಯಾಸ್ ಸಂಪರ್ಕ ಯಾರ ಹೆಸರಿನಲ್ಲಿದೆಯೋ, ಆ ವ್ಯಕ್ತಿಯೇ ಸಂಬಂಧಿಸಿದ ಗ್ಯಾಸ್ ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಲಾಗಿನ್ ಆಗಿ ಇ-ಕೆವೈಸಿ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಆಧಾರ್ ಸಂಖ್ಯೆ ಹಾಗೂ ಗ್ಯಾಸ್ ಸಂಪರ್ಕದ ವಿವರಗಳನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಒಂದು ವೇಳೆ ಆನ್‌ಲೈನ್‌ನಲ್ಲಿ ಮಾಡಲು ಕಷ್ಟವಾದರೆ, ನೇರವಾಗಿ ನಿಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಈ ಹಂತವನ್ನು ಪೂರ್ಣ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸಲು ಬರುವ ಡೆಲಿವರಿ ಸಿಬ್ಬಂದಿ ಬಳಿ ಇರುವ ಡಿಜಿಟಲ್ ಸಾಧನದ ಮೂಲಕವೂ ನೀವು ಇ-ಕೆವೈಸಿ ಮಾಡಿಕೊಳ್ಳುವ ಅವಕಾಶವಿದೆ.

ಹಾಗಾಗಿ ಯಾರೂ ಆತಂಕಗೊಳ್ಳದೆ, ನಿಗದಿತ ದಿನಾಂಕದೊಳಗೆ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ತಪ್ಪದೇ ಶೇರ್ ಮಾಡಿ.

About The Author