Haveri News: ಹಾವೇರಿ: ರಾಯರ ಕೃಪೆ ಇದ್ದರೆ ಮನದಲ್ಲಿ ಅಂದುಕ“ಂಡ ಎಲ್ಲ ಕೆಲಸಗಳೂ ಈಡೇರುತ್ತದೆ. ಎಲ್ಲ ಕಷ್ಟಗಳು ಪರಿಹಾರವಾಗುತ್ತದೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಇಲ್ಲಿ 1 ಪ್ರಕರಣದಲ್ಲಿ ರಾಯರ ಪವಾಡದಿಂದ ಓರ್ವ ವಿದ್ಯಾರ್ಥಿನಿ ಬದುಕುಳಿದಿದ್ದಾಳೆ.
ನೆಗಳೂರು ಗ್ರಾಮದ ಶಿವಪ್ಪ ನೆಗಳೂರು ಅವರ ಪುತ್ರಿ ನಿವೇದಿತಾ ಗದಗನಲ್ಲಿ MBBS ಫೈನಲ್ ಇಯರ್ ಓದುತ್ತಿದ್ದಳು. ಈಕೆ ಅಪರೂಪದ ಖಾಯಿಲೆಯಾಗಿದ್ದ ಆಟೋ ಇಮ್ಯೂನ್ ಖಾಯಿಲೆಯಿಂದ ಬಳಲಿ, ವ್ಹೀಲ್ ಚೇರ್ ಸೇರಿದ್ದಳು. ಪದೇ ಪದೇ ಮೂರ್ಛೆ ಹೋಗುತ್ತಿದ್ದಳು. ಕೈ ಕಾಲಿನಲ್ಲಿ ಸ್ವಾಧೀನವೂ ಇರಲಿಲ್ಲ. ಹಲವು ಫೇಮಸ್ ಆಸ್ಪ್ರತೆಗೆ ಹೋಗಿ ಲಕ್ಷ ಲಕ್ಷ ಖರ್ಚು ಮಾಡಿದ್ರೂ, ಉಪಯೋಗವಾಗಲಿಲ್ಲ. ವೈದ್ಯರು ಈಕೆ ಬದುಕುಳಿಯುವುದೇ ಸಂಶಯ ಎಂದಿದ್ದರು.
ಆದರೆ ನೀನೇ ಗತಿ ಎಂದು ನಿವೇದಿತಾ ಮನೆಯವರು ಮೊರೆ ಹೋಗಿದ್ದು ರಾಯರನ್ನ.
ಹೊಸರಿತ್ತಿ ರಾಯರ ಮಠಕ್ಕೆ ಸುಭುದೇಂದ್ರ ತೀರ್ಥ ಶ್ರೀಗಳು ಆಗಮಿಸಿದ್ದಾಗ, ನಿವೇದಿತಾಳ ಮನೆಯವರು ಆಕೆಯನ್ನು ಕರೆದ“ಯ್ದಿದ್ದರು. ಈ ವೇಳೆ ಸುಬುದೇಂದ್ರ ಶ್ರೀಗಳು ಮಂತ್ರಾಕ್ಷತೆ ನೀಡಿ, ಐದು ವಾರ ರಾಯರ ಮಠಕ್ಕೆ ನಡೆದುಕೊಳ್ಳುವಂತೆ ಸಲಹೆ ನೀಡಿದರು. ಅವರ ಮಾತಿನಂತೆ ನಡೆದುಕ“ಳ್ಳುವಾಗ ಕೇವಲ ಮೂರನೇ ವಾರದಲ್ಲೇ ನಿವೇದಿತಾಳದ ಆರೋಗ್ಯದಲ್ಲಿ ಮಹತ್ವದ ಚೇತರಿಕೆ ಕಂಡುಬಂದಿದೆ. ಹೀಗಾಗಿ ರಾಯರ ಪವಾಡದಿಂದಲೇ ಮಗಳು ಬದುಕುಳಿದಿದ್ದಾಳೆ ಎಂದ ಕುಟುಂಬಸ್ಥರು ಹೇಳಿದ್ದಾರೆ.




