Movie News: ನಾನು ಹೆಮ್ಮೆಯ ಅಂಧಭಕ್ತೆ ಎಂದ ಸೂರ್ಯವಂಶ ನಟಿ ಇಶಾ

Movie News: ಸೂರ್ಯವಂಶ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಇಶಾ ಕೋಪ್ಪಿಕರ್ ತಾವು ಹೆಮ್ಮೆಯ ಅಂಧಭಕ್ತೆ ಎಂದು ಹೇಳಿಕೆ ನೀಡಿದ್ದಾರೆ. ತಮ್ಮ ಇನ್‌ಸ್ಟಾಖಾತೆಯಲ್ಲಿ ಈ ಬಗ್ಗೆ ವೀಡಿಯೋ ಶೇರ್ ಮಾಡಿರುವ ಇಶಾ, ತಮ್ಮ ದೇಶದ ಬೆಳವಣಿಗೆ ಕಂಡು ಹೆಮ್ಮೆ ಪಡುವವರು ಅಂಧಭಕ್ತರು ಎಂದಾದರೆ, ನಾನು ಹೆಮ್ಮೆಯ ಅಂಧ ಭಕ್ತೆ ಎಂದು ಹೇಳಿಕ“ಳ್ಳುತ್ತೇನೆ ಎಂದು ಇಶಾ ಹೇಳಿದ್ದಾರೆ.

ಅಲ್ಲದೇ ನನ್ನ ಅಂಧಭಕ್ತಿ ಇರುವುದು ಯಾವುದೇ ಪಕ್ಷದ ಮೇಲಲ್ಲ ಬದಲಾಗಿ ನನ್ನ ದೇಶದ ಬಗ್ಗೆ ನನಗೆ ಭಕ್ತಿ ಇದೆ. ಹೆಮ್ಮೆ ಇದೆ. ನಾನು ಸರ್ಕಾರದ ನೀತಿಗಳನ್ನು ಪ್ರಶ್ನಿಸಬಹುದು, ಭಿನ್ನಾಭಿಪ್ರಾಯಗಳಿರಬಹುದು. ಆದರೆ ದೇಶವನ್ನು ನಾನು ಪರಿಪೂರ್ಣ ಮನಸ್ಸಿನಿಂದ ಪ್ರೀತಿಸುತ್ತೇನೆ ಎಂದು ಇಶಾ ಹೇಳಿದ್ದಾರೆ.

ಅಲ್ಲದೇ, ದೇಶ ನಮಗೇನು ಮಾಡಿದೆ ಎಂದು ಕೇಳುವ ಬದಲು, ನಾವು ದೇಶಕ್ಕೆ ಏನು ಮಾಡಿದ್ದೇವೆ ಎಂದು ಕೇಳಬೇಕು. ಭಾರತ ಇಂದು ವೇಗವಾಗಿ ಬದಲಾಗುತ್ತಿದೆ. ಹಾಗಾಗಿ ನೂತನ ಭಾರತ ನಿರ್ಮಾಣಕ್ಕಾಗಿ ನಾವು ಅದೇ ರೀತಿಯ ಉನ್ನತ ಆಲೋಚನೆಗಳನ್ನು ಮಾಡಬೇಕಿದೆ ಎಂದು ಇಶಾ ಹೇಳಿದ್ದಾರೆ.

About The Author