ರಾಜಕೀಯ ಅಂಗಳದಲ್ಲಿ ಈಗ ಮತ್ತೊಂದು ಹೊಸ ವಿವಾದ ಸದ್ದು ಮಾಡ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆ ಉದ್ಯಮಿ ಗೌತಮ್ ಅದಾನಿ ನಡೆಸಿರುವ ಭೇಟಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಕಾಂಗ್ರೆಸ್ ಪಕ್ಷ ನೀಡಿರುವ ಸ್ಪಷ್ಟನೆ ಏನು? ಇಲ್ಲಿದೆ ನೋಡಿ ಅದರ ಸಂಪೂರ್ಣ ವಿವರ.
ಎಸ್ ‘ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಈ ಮಹತ್ವದ ಭೇಟಿ ನಡೆದಿದೆ. ಸುಮಾರು 20 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ, ರಾಜ್ಯದಲ್ಲಿ ಹೂಡಿಕೆ ಹಾಗೂ ಬಹುಮುಖ್ಯವಾದ ಬೆಂಗಳೂರಿನ ಸುರಂಗ ರಸ್ತೆ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗಿನ 17 ಕಿ.ಮೀ ಸುರಂಗ ರಸ್ತೆಗೆ ಸರ್ಕಾರ 17,698 ಕೋಟಿ ರೂ. ಅಂದಾಜಿಸಿದ್ದರೆ, ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯು 22,267 ಕೋಟಿ ರೂಪಾಯಿಗೆ ಕಡಿಮೆ ಬಿಡ್ ಸಲ್ಲಿಸಿದೆ. ಈ ಬಗ್ಗೆ ಇದು ಕೇವಲ ಒಂದು ಸೌಜನ್ಯದ ಭೇಟಿ ಅಂತ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಈ ಭೇಟಿಯ ಬೆನ್ನಲ್ಲೇ ವಿರೋಧ ಪಕ್ಷವಾದ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಂದೆ ಅದಾನಿ ವಿರುದ್ಧ ಉಗ್ರವಾಗಿ ಟೀಕೆ ಮಾಡ್ತಿದ್ದ ಕಾಂಗ್ರೆಸ್ ನಾಯಕರು, ಈಗ ಅಧಿಕಾರಕ್ಕೆ ಬಂದ ಮೇಲೆ ಉದ್ಯಮಿಗಳ ಜೊತೆ ರಹಸ್ಯ ಒಡಂಬಡಿಕೆ ಮಾಡಿಕೊಳ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ರಾಜಕೀಯ ವಾಕ್ಸಮರ ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ಎಲ್ಲ ಟೀಕೆಗಳಿಗೆ ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾ, ‘ನಮ್ಮ ಹೋರಾಟ ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿ ಅಥವಾ ಉದ್ಯಮಿಯ ವಿರುದ್ಧ ಅಲ್ಲ, ಬದಲಿಗೆ ಏಕಸ್ವಾಮ್ಯದ ವಿರುದ್ಧ’ ಎಂದು ಸ್ಪಷ್ಟಪಡಿಸಿದ್ದಾರೆ. ದೇಶದ ಎಲ್ಲಾ ಕ್ಷೇತ್ರಗಳ ನಿಯಂತ್ರಣ ಒಬ್ಬನೇ ಉದ್ಯಮಿಯ ಕೈಗೆ ಸಿಗುವುದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ ಎಂಬುದು ನಮ್ಮ ಪಕ್ಷದ ಗಟ್ಟಿಯಾದ ನಿಲುವು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಸಿಎಂ-ಅದಾನಿ ಭೇಟಿ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ಅಂತ ಹೇಳಬಹುದು! ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ
