Haveri News: ಬಿ.ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಹಲವು ಶಾಸಕರು ತಮಗೂ ಮಂತ್ರಿ ಸ್ಥಾನ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ಅದೇ ರೀತಿ ಹಾವೇರಿಯಲ್ಲಿ ಕೂಡ ಬಸವರಾಜ್ ಶಿವಣ್ಣನವರ್ರಿಗೂ ಸಚಿವರಾಗುವ ಆಕಾಂಕ್ಷೆ ಇದೆ. ಹಾಗಾಗಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಬಸವರಾಜ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿರುವ ಖಾದ್ರಿ, ಸಚಿವ ಬಿ.ನಾಗೇಂದ್ರ ಮೇಲಿರುವ ಆರೋಪಗಳು ಬಹಳಷ್ಟು ಜನರ ಮೇಲಿದೆ. ನಾಗೇಂದ್ರ ರಾಜೀನಾಮೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶಾಸಕ ಬಸವರಾಜ್ ಶಿವಣ್ಣನವರ್‌ರನ್ನು ಹೈಕಮಾಂಡ್ ಮಂತ್ರಿ ಮಾಡಲಿ. ಉತ್ತರ ಕರ್ನಾಟಕದ ಹಾಲುಮತ ಸಮಾಜಕ್ಕೆ ಸಚಿವ ಸ್ಥಾನವನ್ನ ನೀಡಲಿ. ಸಿದ್ದರಾಮಯ್ಯನವರು ಮೊದಲೇ ಶಿವಣ್ಣನವರ್ ಹೆಸರು ದೆಹಲಿಗೆ ಕಳುಹಿಸಿದ್ದರು. ಬಸವರಾಜ್ ಶಿವಣ್ಣನವರ್‌ಗೆ ಸಚಿವ ಸ್ಥಾನ ಸಿಗುವ ಸಂಪೂರ್ಣ ವಿಶ್ವಾಸವಿದೆ. ಹಾವೇರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವ ವಿಶ್ವಾಸ ನನಗಿದೆ..
ಮಹಿಳಾ ಕೋಟಾ ಯಾರಿಗಾದರೂ ಕೊಡಲಿ, ಮತ್ತೊಂದು ಸ್ಥಾನ ಶಿವಣ್ಣನವರ್‌ಗೆ ನೀಡಲಿ. 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇದರಿಂದ ಬಹಳಷ್ಟು ಅನುಕೂಲ ಆಗಲಿದೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗಲಿದೆ. ಈ ಸಮಾಜದ ಜನರು ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಅಹಿಂದ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ. ಬಸವರಾಜ್ ಶಿವಣ್ಣನವರ್ ಶೀಘ್ರದಲ್ಲೇ ಸಚಿವರಾಗುತ್ತಾರೆ. ಹಾವೇರಿಗೆ ಇನ್ನೊಬ್ಬ ಸಚಿವ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಅಜ್ಜಂಪೀರ್ ಖಾದ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
