ಟಾಕ್ಸಿಕ್ ಬಗ್ಗೆ ಶಿವಣ್ಣ ಮಾತು – ಮುಂಬೈನಲ್ಲಿ ಹೇಳಿದ್ದೆ ಬೇರೆ?

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಹಾಗೂ ಯಶಸ್ವಿ ನಿರ್ದೇಶಕ ಆರ್. ಚಂದ್ರು ಅವರ ಹೊಸ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ದೈತ್ಯ ಪ್ಯಾನ್-ಇಂಡಿಯಾ ಸಿನಿಮಾ ‘ಒರಿಜಿನಲ್ ಮಾನ್‌ಸ್ಟರ್’ ಮುಂಬೈನಲ್ಲಿ ಅಧಿಕೃತವಾಗಿ ಘೋಷಣೆಯಾಗಿದೆ. ಮುಂಬೈನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಪತ್ರಿಕಾಗೋಷ್ಠಿಯಲ್ಲಿ ಈ ಬೃಹತ್ ಯೋಜನೆಯನ್ನು ಅನಾವರಣಗೊಳಿಸಲಾಯಿತು.

ಆದರೆ, ಈ ಕಾರ್ಯಕ್ರಮದಲ್ಲಿ ಸಿನಿಮಾದ ಹೈಲೈಟ್ಸ್ ಜೊತೆಗೆ ಮತ್ತೊಂದು ವಿಚಾರ ಭಾರಿ ಚರ್ಚೆಗೆ ಗ್ರಾಸವಾಯಿತು. ಪತ್ರಿಕಾಗೋಷ್ಠಿಯ ವೇಳೆ ಮಾಧ್ಯಮದವರೊಬ್ಬರು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಸಿಗುತ್ತಿರುವ ಮಿಶ್ರ ಹಾಗೂ ನೆಗೆಟಿವ್ ಪ್ರತಿಕ್ರಿಯೆಗಳ ಬಗ್ಗೆ ಶಿವಣ್ಣ ಅವರ ಅಭಿಪ್ರಾಯ ಕೋರಿದರು. ಆಗ ‘ಈ ಸೂಕ್ಷ್ಮ ಪ್ರಶ್ನೆಗೆ ಸ್ಯಾಂಡಲ್‌ವುಡ್‌ನ ಹಿರಿಯಣ್ಣನ ಸ್ಥಾನದಲ್ಲಿದ್ದುಕೊಂಡು ಶಿವಣ್ಣ ಅತ್ಯಂತ ಧೈರ್ಯ ಹಾಗೂ ನೇರವಾದ ಉತ್ತರ ನೀಡಿದ್ದಾರೆ.

ಎಸ್ ‘ಚಿತ್ರರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸೃಷ್ಟಿಕರ್ತನಿಗೂ ತನ್ನದೇ ಆದ ಶೈಲಿಯಲ್ಲಿ ಕಥೆ ಹೇಳುವ ಸ್ವಾತಂತ್ರ್ಯವಿದೆ ಎಂದ ಶಿವಣ್ಣ, ಟಾಕ್ಸಿಕ್ ತಂಡ ಸಿನಿರಸಿಕರಿಗೆ ಹೊಸ ಅನುಭವ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ತಿಳಿಸಿದರು. ಯಾವುದೇ ಚಿತ್ರವನ್ನು ಪೂರ್ಣವಾಗಿ ವೀಕ್ಷಿಸದೆ ಅದರ ಬಗ್ಗೆ ಅಂತಿಮ ತೀರ್ಪು ನೀಡುವುದು ಸರಿಯಲ್ಲ ಎಂದ ಅವರು, ಕೆಲವೇ ಕೆಲವು ನೆಗೆಟಿವ್ ಟೀಕೆಗಳು ಸಿನಿಮಾದ ಮೌಲ್ಯವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಅನಗತ್ಯ ನೆಗೆಟಿವ್ ಪ್ರಚಾರ ಮಾಡುವವರಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದರು.

ಇದೇ ವೇದಿಕೆಯಲ್ಲಿ ನಿರ್ದೇಶಕ ಆರ್. ಚಂದ್ರು ತಮ್ಮ ವೃತ್ತಿಜೀವನದ ದೊಡ್ಡ ಮೈಲಿಗಲ್ಲನ್ನು ಹಂಚಿಕೊಂಡರು. ಚಂದ್ರು ಅವರು ಪ್ರಸಿದ್ಧ ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅವರೊಂದಿಗೆ ಕೈಜೋಡಿಸುವ ಮೂಲಕ ಬಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆಗೆ ತೆಲುಗಿನ ಜನಪ್ರಿಯ ನಟ ಸುನೀಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅತ್ಯಂತ ದೊಡ್ಡ ಬಜೆಟ್‌ನಲ್ಲಿ ಹಿಂದಿ, ಕನ್ನಡ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಅಂತ ಹೇಳೆಲಾಗ್ತಿದೆ. ಬಾಲಿವುಡ್ ಮತ್ತು ದಕ್ಷಿಣ ಭಾರತದ ದೊಡ್ಡ ತಾರೆಯರನ್ನು ಒಟ್ಟುಗೂಡಿಸಿ ನಿರ್ಮಿಸುತ್ತಿರುವ ಈ ಸಿನಿಮಾ ಈಗಿನಿಂದಲೇ ಭಾರತೀಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ ಅಂತಾನೆ ಹೇಳಬಹುದು.

About The Author