‘ಜಾಡಿಸಿ ಒದೀತೀನಿ ಎಂದಿರಬೇಕು’ – ಈಶ್ವರಪ್ಪನ ಪಂಚ್ ವೈರಲ್!

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಧರ್ಮದ ವಿಚಾರವಾಗಿ ಮಾತುಗಳ ಯುದ್ಧ ಸಕತ್ ಕಾವೇರಿದೆ. ಸಚಿವ ಬಸವರಾಜ್ ರಾಯರೆಡ್ಡಿ ಅವರ ವಿವಾದಾತ್ಮಕ ಹೇಳಿಕೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ನೀಡಿರುವ ಹಾಸ್ಯಭರಿತ ಹಾಗೂ ಖಡಕ್ ತಿರುಗೇಟು ಈಗ ಸಖತ್ ವೈರಲ್ ಆಗ್ತಿದೆ.

ಹೌದು ‘ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪನವರು, ರಾಯರೆಡ್ಡಿ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಇಸ್ಲಾಂ ಧರ್ಮ ಶ್ರೇಷ್ಠ ಅನ್ನೋ ಅರ್ಥದಲ್ಲಿ ಮಾತನಾಡಿದ ರಾಯರೆಡ್ಡಿಗೆ ನೇರ ಸವಾಲೆಸೆದ ಈಶ್ವರಪ್ಪ, “ಅವರಿಗೆ ಅಷ್ಟು ಒಲವಿದ್ರೆ ಮುಂಜಿ ಮಾಡ್ಕೊಂಡು ಹಜ್ ಯಾತ್ರೆಗೆ ಹೋಗ್ಲಿ” ಅಂತ ಕುಟುಕಿದ್ದಾರೆ. ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಲು ಇವರಿಗೆ ಯಾರು ಅಧಿಕಾರ ಕೊಟ್ಟಿದ್ದು ಅಂತ ಪ್ರಶ್ನೆ ಮಾಡಿದ್ದಾರೆ.

ಇಲ್ಲಿಯವರೆಗೆ ಸಕತ್ ಸೀರಿಯಸ್ ಆಗಿದ್ದ ಮ್ಯಾಟರ್, ಈಶ್ವರಪ್ಪನವರ ಮತ್ತೊಂದು ಮಾತಿನಿಂದ ನಗುವಿಗೆ ಕಾರಣವಾಗಿದೆ! ನಿನ್ನೆ ಆ ರೀತಿ ವಿವಾದಾತ್ಮಕವಾಗಿ ಮಾತನಾಡಿ, ಇವತ್ತು ಏಕಾಏಕಿ ದೇವಸ್ಥಾನಕ್ಕೆ ಹೋಗಿರುವ ರಾಯರೆಡ್ಡಿ ನಡೆ ಬಗ್ಗೆ ವ್ಯಂಗ್ಯವಾಡಿದ ಈಶ್ವರಪ್ಪ, “ರಾತ್ರಿ ಕನಸಲ್ಲಿ ಆಂಜನೇಯ ಬಂದು ಜಾಡಿಸಿ ಒದೀತೀನಿ ಮಗನೇ ಅಂದಿರಬೇಕು, ಅದಕ್ಕೇ ಓಡೋಡಿ ದೇವಾಲಯಕ್ಕೆ ಹೋಗಿದ್ದಾರೆ ಅನಿಸುತ್ತಿದೆ” ಅಂತ ಸಕ್ಕತ್ ಪಂಚ್ ಕೊಟ್ಟಿದ್ದಾರೆ! ಇನ್ನೊಬ್ಬರ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಮಾತುಗಳನ್ನ ಆಡಬಾರದು ಅಂತ ಕಿವಿಮಾತು ಕೂಡ ಹೇಳಿದ್ದಾರೆ.

ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧರ್ಮಗಳ ನಡುವೆ ಸಂಘರ್ಷ ತರುವ ಮತ್ತು ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ನಾಯಕರುಗಳೇ ಈ ಸರ್ಕಾರದ ಭಾಗವಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು. ಅದಲ್ಲದೆ, ಬೇರೆಯವರ ಭಾವನೆಗಳಿಗೆ ಧಕ್ಕೆ ತಂದಿರುವ ಸಚಿವ ರಾಯರೆಡ್ಡಿ ವಿರುದ್ಧ ಗೃಹ ಸಚಿವರು ತಕ್ಷಣವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಅಂತ ಆಗ್ರಹಿಸಿದ್ದಾರೆ.

ಎಸ್ ‘ರಾಯರೆಡ್ಡಿ ಅವರ ಆ ಹೇಳಿಕೆ ಹಾಗೂ ಅದಕ್ಕೆ ಈಶ್ವರಪ್ಪ ನೀಡಿರುವ ‘ಆಂಜನೇಯನ ಕನಸು’ ಮತ್ತು ‘ಹಜ್ ಯಾತ್ರೆ’ಯ ವ್ಯಂಗ್ಯದ ಟಾಂಗ್ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ರಾಜಕೀಯ ಮಾತಿನ ಚಕಮಕಿ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ ಕಾದು ನೋಡೋಣ.

About The Author