ಗೃಹಲಕ್ಷ್ಮೀ ಯೋಜನೆಗೆ 3 ವರ್ಷವೆಂದು ಕೋಟಿ ಖರ್ಚು ಮಾಡುವ ಬದಲು ಬಾಕಿ ನೀಡಬಹುದಿತ್ತಲ್ಲಾ..?: ಸಿ.ಟಿ.ರವಿ

Political News: ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಮಾರುಕಟ್ಟೆಗೆ ಭೇಟಿ ನೀಡಿದ್ದಾಗ, ಅಲ್ಲಿನ ಕೆಲ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಂತಾ ಎಂದು ಕೇಳಿದಾಗ, ಇನ್ನೂ 2-3 ತಿಂಗಳ ಬಾಕಿ ಹಣ ಬರಬೇಕಿದೆ ಎಂದಿದ್ದಾರೆ. ಈ ವೀಡಿಯೋವನ್ನು ಬಿಜೆಪಿ ನಾಯಕರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಶಾಸಕ ಸಿ.ಟಿ.ರವಿ ಈ ಬಗ್ಗೆ ವೀಡಿಯೋ ಅಪ್ಲೋಡ್ ಮಾಡಿದ್ದು, ಗೃಹಲಕ್ಷ್ಮಿಗೆ 3 ವರ್ಷ ಎಂದು ಎಲ್ಲ ಪತ್ರಿಕೆ, ಟಿವಿ, ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡಿಸಿದಿರಲ್ಲ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಆ ಹಣದಲ್ಲೇ ತಾಯಂದಿರಿಗೆ ಗೃಹಲಕ್ಷ್ಮಿ ಬಾಕಿಯನ್ನು ಕೊಡಬಹುದಿತ್ತಲ್ಲ? ಎಂದು ಪ್ರಶ್ನಿಸಿದ್ದಾರೆ.

ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಪಾವತಿಯಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಸರ್ಕಾರಕ್ಕೆ ಗೃಹಲಕ್ಷ್ಮಿ ನೆನಪಾಗುತ್ತದೆ. ಮೂರು ತಿಂಗಳ ಬಾಕಿ ಹಣ ಎಲ್ಲಿ ಹೋಯಿತು? ಅದರ ಲೆಕ್ಕವನ್ನು ಪಾರದರ್ಶಕವಾಗಿ ಸರ್ಕಾರ ಜನರ ಮುಂದೆ ಇಡಲೇಬೇಕು.

ಗೃಹಲಕ್ಷ್ಮಿ ಯೋಜನೆಗೆ ಹಣವನ್ನೇ ಪಾವತಿಸದ ಮೇಲೆ ಅದರ ಜಾಹೀರಾತು ಹಾಕಿ ಸಂಭ್ರಮಿಸುವುದಾದರೂ ಏಕೆ? ಗೃಹಲಕ್ಷ್ಮಿ ಹೆಸರಿನಲ್ಲಿ ಮಹಿಳೆಯರಿಗೆ ಮೋಸ ಮಾಡಲು ನೋಡಬೇಡಿ. ಮೊದಲು ಬಾಕಿ ಇರುವ 3 ತಿಂಗಳ ಮೊತ್ತವನ್ನು ಬಿಡುಗಡೆಗೊಳಿಸಿ ಎಂದು ರವಿ ಆಗ್ರಹಿಸಿದ್ದಾರೆ.

About The Author