Political News: ಬೆಳ್ಳಂಬೆಳಿಗ್ಗೆ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ:ಪುತ್ರಿ ಪ್ರಿಯಾಂಕಾಗೂ ನೋಟೀಸ್

Political News: ಬೆಳ್ಳಂಬೆಳಿಗ್ಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿರುವ ಸಚಿವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ, ಸಚಿವರ ಪುತ್ರಿ ಪ್ರಿಯಾಂಕಾಗೂ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.

ದೇಶದ 15 ಕಡೆಗಳಲ್ಲಿ ದಾಳಿ ನಡೆದಿದ್ದು, ವಿದೇಶದಲ್ಲಿ ಹಣ ಹೂಡಿಕೆಗೆ ಸಚಿವರು ಸಹಾಯ ಮಾಡಿದ್ದರೆಂಬ ಆರೋಪವಿದೆ. ಇನ್ನು ದಾಳಿ ನಡೆದ ಕಾರಣಕ್ಕೆ ಸಚಿವ ಮನೆಯ ಸುತ್ತ ಮುತ್ಲು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸಚಿವರ ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಅಬಕಾರಿ ಆಯುಕ್ತ ಮಂಜುನಾಥ್ ಹಲವು ವ್ಯವಹಾರಗಳಲ್ಲಿ ಪಾಲುದಾರರು ಎನ್ನಲಾಗಿದ್ದು, ಇವರ ಮನೆಗಳ ಮೇಲೂ ದಾಳಿ ಮುಂದುವರಿದಿದೆ. ಮೂಲಗಳ ಪ್ರಕಾರ, ಸುಮಾರು 18 ಅನಧಿಕೃತ ಬಾರ್ ಲೈಸೆನ್ಸ್‌ಗಳನ್ನು ನೀಡಲು ಸಹಾಯ ಮಾಡಲಾಗಿದೆ ಎಂಬ ಗಂಭೀರ ಆರೋಪ ಸಚಿವರ ಮೇಲಿದೆ. ಇದರ ಜೊತೆಗೆ, ಅಕ್ರಮ ವಿದೇಶಿ ಹಣ ಹೂಡಿಕೆ ಹಾಗೂ ಹಣ ಅಕ್ರಮ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿಂದೆ ಪತ್ತೆಯಾಗಿದ್ದ ಸುಮಾರು 3 ಕೋಟಿ ರೂಪಾಯಿ ಅಕ್ರಮ ವಿದೇಶಿ ಹಣದ ಪ್ರಕರಣದ ತನಿಖೆಯನ್ನು ಇ.ಡಿ ಚುರುಕುಗೊಳಿಸಿದೆ.

About The Author