Money Mantra: 5 ಮಾರ್ವಾಡಿ ಮನಿ ರೂಲ್ಸ್ ತಿಳಿಯಿರಿ, ಆರ್ಥಿಕಾಗಿ ಯಶಸ್ವಿಯಾಗಿ

Money Mantra: ಮಾರ್ವಾಡಿಗಳು ಅದೆಷ್ಟು ಜಾಣತನದಿಂದ ಶ್ರೀಮಂತರಾಗ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವೆಲ್ಲಾ ನಮ್ಮ ಮಕ್ಕಳು ಎಂಜಿನಿಯರ್, ವೈದ್ಯರು, ಲೆಕ್ಚರರ್ ಆಗ್ತಾರೆ ಅಂತಾ ಹೇಳ್ತೀವಿ. ಆದರೆ ಮಾರ್ವಾಡಿಗಳು ನಮ್ಮ ಮಕ್ಕಳು ಮುಂದೆ ನಮ್ಮ ವ್ಯವಹಾರವನ್ನು ಸಂಭಾಳಿಸುತ್ತಾರೆ ಅಂತಾನೇ ಹೇಳ್ತಾರೆ. ಅಲ್ಲದೇ, ಅವರ ಮಕ್ಕಳಿಗೆ ಚಿಕ್ಕಂದಿನಿಂದಲೇ ಹಣದ ಬಗ್ಗೆ ಅರಿವು ಮೂಡಿಸಿರುತ್ತಾರೆ. ಚಿಕ್ಕವರಿದ್ದಾಗಲೇ, ವ್ಯಾಪಾರ ಜ್ಞಾನ ತಿಳಿಸಿರುತ್ತಾರೆ.

ಅಲ್ಲದೇ ಎಂಬಿಎ, ಸಿಎಂ ಹೀಗೆ ವ್ಯಾಪಾರ, ಉದ್ಯಮಕ್ಕೆ ಸಂಬಂಧಿಸಿದ ಶಿಕ್ಷಣವನ್ನೇ ಮಕ್ಕಳಿಗೆ ನೀಡುತ್ತಾರೆ. ಹಾಗಾಗಿಯೇ ವ್ಯಾಪಾರಿಗಳು ಉದ್ಯಮದಲ್ಲಿ ಮುಂದುವರಿದು, ದೇಶದಲ್ಲಿ ಹೆಸರು ಮಾಡಿದ್ದಾರೆ. ನಾವಿಂದು ಮಾರ್ವಾಡಿಗಳನ್ನು ನೋಡಿ ನಾವು ಕಲಿಯಬೇಕಾದ 5 ಮನಿ ರೂಲ್ಸ್ ಬಗ್ಗೆ ವಿವರಿಸಲಿದ್ದೇವೆ.

  1. ಹಣ ಉಳಿತಾಯ ಮತ್ತು ಹೂಡಿಕೆ: ಬೇರೆ ಪೋಷಕರು ತಮ್ಮ ಮಕ್ಕಳಿಗೆ ಹಣ ಉಳಿಸು ಎಂದು ಹೇಳುತ್ತಾರೆ. ಆದರೆ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ಹಣ ಉಳಿಸುವುದರ ಜತೆಗೆ ಅದನ್ನು ಹೂಡಿಕೆ ಮಾಡಿ ಬೆಳೆಸುವುದನ್ನೂ ಕಲಿಸುತ್ತಾರೆ. ಏಕೆಂದರೆ, ಉಳಿತಾಯದ ಹಣ ನಿಂತ ನೀರಿನಂತೆ. ದಿನದಿಂದ ದಿನಕ್ಕೆ ಹಣದುಬ್ಬರ ಹೆಚ್ಚುತ್ತಿದ್ದಂತೆ, ಉಳಿತಾಯದ ಹಣಕ್ಕೆ ಬೆಲೆ ಇರುವುದಿಲ್ಲ. ಆದರೆ ಹೂಡಿಕೆ ಮಾಡಿದರೆ, ಹಣದುಬ್ಬರವನ್ನು ಮೀರಿಸುವ ಹಣ ನಿಮ್ಮ ಬಳಿ ಇರುತ್ತದೆ. ಹಾಗಾಗಿ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ತಿಳಿಸುವ ಪ್ರಥಮ ಸಂಗತಿಯೇ ಹೂಡಿಕೆ ಮಾಡುವುದು.
  2. ಗಳಿಸುವ ಮುನ್ನ ಖರ್ಚು ಮಾಡಕೂಡದು: ಸಾಮಾನ್ಯ ಜನರ ಮಕ್ಕಳು ದುಡಿಮೆ ಶುರುವಾಗುವ ಮುನ್ನವೇ, ಭವಿಷ್ಯದಲ್ಲಿ ಬರಬೇಕಾದ ಸ್ಯಾಲರಿ ನಂಬಿ, ಇಎಂಐ ಮೇಲೆ ವಸ್ತುಗಳನ್ನು ಖರೀದಿಸಲೂ ಶುರು ಮಾಡುತ್ತಾರೆ. ಆದರೆ ಮಾರ್ವಾಡಿಗಳ ಮಕ್ಕಳು ಎಂದಿಗೂ ಹಾಗೆ ಮಾಡುವುದಿಲ್ಲ. ಏಕೆಂದರೆ ಅವರಿಗೆ ದುಡಿದು ಗಳಿಸುವ ಮುನ್ನ ಹಣ ಖರ್ಚು ಮಾಡಕೂಡದು ಎನ್ನುವ ಮಾತನ್ನು ಪೋಷಕರು ಹೇಳಿರುತ್ತಾರೆ. ಬಾಲ್ಯದಲ್ಲೇ ಈ ಮನಸ್ಥಿತಿ ಇರುವ ಹಾಗೆ ಮಾಡುವ ಕಾರಣ, ಭವಿಷ್ಯದಲ್ಲೂ ಮಕ್ಕಳು ಅದೇ ಮಾತನ್ನು ಫಾಲೋ ಮಾಡ್ತಾರೆ.
  3. ಗ್ರಾಹಕರ ಜತೆ ಬಾಂಧವ್ಯ: ನೀವು ಮಾರ್ವಾಡಿಗಳ ಅಂಗಡಿಗೆ ಹೋದಾಗ, ಅಲ್ಲಿ ಅವರು ಅಕ್ಕ-ಅಣ್ಣ-ತಮ್ಮ ಅಂತಲೇ ಮಾತಾಡಿಸ್ತಾರೆ. ಬಾರ್ಗೇನ್ ವಿಚಾರಕ್ಕೆ ಬಂದ್ರೆ ನಯವಾಗಿಯೇ ಬಾರ್ಗೇನ್ ಕಡಿಮೆ ಮಾಡುವಂತೆ ಮಾಡಿ, ಅವರಿಗೆ ಲಾಭ ಬರುವಂತೆಯೇ ವ್ಯಾಪಾರ ಮಾಡುತ್ತಾರೆ. ಮತ್ತೆ ಮತ್ತೆ ಆ ವಸ್ತು ಖರೀದಿಸಲು ನಾವು ಅವರದ್ದೇ ಅಂಗಡಿಗೆ ಹೋಗುವಂತೆ ಅವರ ಮಾತಿನ ಶೈಲಿ ಇರುತ್ತದೆ. ಅವರ ಮಕ್ಕಳಿಗೂ ಕೂಡ ಇದೇ ರೀತಿ ಬಾಂಧವ್ಯ ಬೆಳೆಸುವ ರೀತಿ ಹೇಳಿಕ“ಟ್ಟಿರುತ್ತಾರೆ.
  4. ಪೈಸೆ ಪೈಸೆಗೂ ಬೆಲೆ ನೀಡಬೇಕು: ಮಾರ್ವಾಡಿಗಳು ಪ್ರತೀ ಪೈಸೆಗೂ ಬೆಲೆ ನೀಡುತ್ತಾರೆ. ಬೇರೆಯವರಾದ್ರೆ 1-2 ರೂಪಾಯಿ ಅಲ್ವಾ ಹೋಗ್ಲಿ ಬಿಡು ಅಂತಾ ಬಿಡ್ಬಹುದೆನೋ ಆದ್ರೆ ಮಾರ್ವಾಡಿಗಳು ಹಾಗಲ್ಲ. ಅವರು ಪ್ರತೀ ರೂಪಾಯಿಗೂ ಬೆಲೆ ನೀಡುತ್ತಾರೆ. ವ್ಯಾಪಾರದ ಸಮಯದಲ್ಲೂ ಈ ರೂಲ್ಸ್ ಫಾಲೋ ಮಾಡ್ತಾರೆ.

5.ಉದ್ಯಮದ ಫಲಿತಾಂಶಕ್ಕೂ ಮುನ್ನ ಶ್ರೀಮಂತಿಕೆ ತೋರಿಸುವಂತಿಲ್ಲ. ಮಾರ್ವಾಡಿಗಳು ತಮ್ಮ ಉದ್ಯಮ 10 ಕಾರ್ ತೆಗೆದುಕ“ಳ್ಳುವ ಸಾಮರ್ಥ್ಯ ಪಡೆಯುವ ಲಾಭ ನೀಡುವವರೆಗೂ ಸಿಂಪಲ್ ಆಗಿರುತ್ತಾರೆ. 10 ಕಾರ್ ಖರೀದಿಸುವ ಸಾಮರ್ಥ್ಯ ಬಂದಾಗ, 1 ಕಾರ್ ಖರೀದಿಸುತ್ತಾರೆ. ಏಕೆಂದರೆ ಅವರಿಗೆ ಶ್ರೀಮಂತಿಕೆ ತೋರಿಸಿಕೋಳ್ಳುವುದು ಮುಖ್ಯವಲ್ಲ. ಬದಲಾಗಿ ನಿಜವಾದ ಶ್ರೀಮಂತರಾಗುವುದು ಮುಖ್ಯ.

About The Author