Money mantra: ಹಣವನ್ನು ಅಟ್ರ್ಯಾಕ್ಟ್ ಮಾಡುವ ಜ್ಯಾಪನೀಸ್ ವಿಧಾನ

Money mantra: ನಾವು ಯಾರಿಗಾದ್ರೂ ಹಣ ನೀಡುವಾಗ ನಮ್ಮ ಮನಸ್ಸಿನಲ್ಲಿ 1 ಹೆದರಿಕೆ ಇರುತ್ತದೆ ಅಥವಾ ಬೇಸರವಾಗಿರುತ್ತದೆ. ಹೆದರಿಕೆ ಅಂದ್ರೆ ನೀಡಿದ ಹಣ ವಾಪಸ್ ಸಿಗತ್ತಾ..? ನೀಡಿದ ಹಣಕ್ಕೆ ತಕ್ಕಂತೆ ಕ್ವಾಲಿಟಿ ಇದೆಯಾ ಈ ರೀತಿಯ ಹೆದರಿಕೆ. ಇನ್ನು ಬೇಸರ ಅಂದ್ರೆ, ಇದಕ್ಕೆ ಇಷ್ಟು ಹಣ ನೀಡೋ ಅವಶ್ಯಕತೆ ಇರ್ಲಿಲ್ಲಾ ಅಥವಾ ಇವರಿಗೆ ಇಷ್ಟು ದಾನ ಮಾಡುವ ಅವಶ್ಯಕತೆ ಇರ್ಲಿಲ್ಲಾ ಅನ್ನೋ ರೀತಿ ಬೇಜಾರು ಇರುತ್ತದೆ.

ಆದರೆ ಜ್ಯಾಪನೀಸ್‌ನ ಮನಿ ಮಂತ್ರ ಹೇಳುವುದೇನೆಂದರೆ, ನಾವು ಹಣ ಖರ್ಚು ಮಾಡುವಾಗ ನಮ್ಮಲ್ಲಿ ಈ ಬೇಸರ ಅಥವಾ ಹೆದರಿಕೆ ಎಂದಿಗೂ ಇರಬಾರದಂತೆ. ಏಕೆಂದರೆ, ಇಂಥ ಯೋಚನೆಗಳು ನಮ್ಮ ಸಬ್‌ ಕಾನ್ಶಿಯಸ್ ಮೈಂಡ್‌ಗೆ ತಿಳಿದು, ನಮಗೆ ನಷ್ಟವೇ ಆಗುವ ರೀತಿಯ ಘಟನೆ ನಡೆಯುತ್ತದೆ ಎಂಬುದು ಜಪಾನಿಗರ ನಂಬಿಕೆ.

ಹಾಗಾಗಿ ಜಪಾನಿಗರು ಹಣ ನೀಡುವಾಗ ಆ್ಯರಿಗ್ಯಾಥೋ ಅಥವಾ ಆ್ಯರಿಗ್ಯಾಟೋ ಎಂಬ ಪದ ಬಳಸುತ್ತಾರಂತೆ. ಅಂದ್ರೆ, ನಾನು ನೀಡಿದ ಹಣ ಉತ್ತಮ ಕೆಲಸಕ್ಕೆ ಬಳಕೆಯಾಗಲಿ. ಮತ್ತು ನಾನು ನೀಡಿದ ಹಣ ನನಗೆ ದುಪ್ಪಟ್ಟಾಗಿ ಸಿಗಲಿ. ಏಕೆಂದರೆ ಹಣ ನನ್ನನ್ನು ಪ್ರೀತಿಸುತ್ತದೆ. ಮತ್ತು ನಾನು ಹಣವನ್ನು ಆಕರ್ಷಿಸುವ ಶಕ್ತಿ ಇರುವವಳು ಎನ್ನುವ ಅರ್ಥವಿರುವ ಶಬ್ಧ.

ಹಾಗಾಗಿ ನೀವು ಇನ್ಮುಂದೆ ಯಾರಿಗಾದ್ರೂ ಹಣ ನೀಡುವಾಗ ಬೇಸರ ಪಡದೇ, ಹೆದರದೇ, ಈ ಮೇಲೆ ಹೇಳಿದ ವಾಕ್ಯವನ್ನು ಮನಸ್ಸಿಂದ ಹೇಳಿ, ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿಪಡಿಸಿಕ“ಳ್ಳಿ.

About The Author