Hubli News: ಎರಡು ಎಟಿಎಂಗಳಿಗೆ ಕನ್ನ..! 14 ಲಕ್ಷ ಹಣ ಕಳವು

Hubli News: ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದಲ್ಲಿ ಒಂದೇ ರಾತ್ರಿ ಎರಡು ಎಟಿಎಂಗಳಿಗೆ ಕನ್ನ ಹಾಕಿದ್ದಾರೆನ್ನಲಾಗಿದೆ..! ಗ್ಯಾಸ್ ಕಟರ್ ಬಳಸಿ ಎಟಿಎಂ ಒಡೆದು ಸುಮಾರು 14 ಲಕ್ಷ ರೂಪಾಯಿ ಹಣ ಕಳವು ಮಾಡಿರುವ ಶಂಕೆ..! ನಡು ಊರಿನಲ್ಲೇ ಎಟಿಎಂ ಕಳ್ಳತನ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಹುಬ್ಬಳ್ಳಿ ತಾಲೂಕಿನ ಎರಡು ಗ್ರಾಮಗಳಲ್ಲಿ ಎಟಿಎಂಗಳಿಗೇ ಕಳ್ಳರ ಕನ್ನ..!
ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮದಲ್ಲಿರುವ ಎಟಿಎಂಗಳಲ್ಲಿ ಬೆಳಗಿನ ಜಾವ ಕಳ್ಳತನ ನಡೆದಿದೆ. ಸುಮಾರು 3 ಗಂಟೆ ವೇಳೆಗೆ ಎಟಿಎಂ ಕೇಂದ್ರಗಳಿಗೆ ನುಗ್ಗಿರುವ ಶಂಕಿತರು, ಹಣದ ಮೇಲೆ ಕಣ್ಣು ಹಾಕಿದ್ದಾರೆ.

ಮೊದಲು ಎಟಿಎಂ ಶೆಟರ್‌ನ ಲಾಕ್ ಮುರಿದಿರುವ ಶಂಕಿತರು, ಬಳಿಕ ಗ್ಯಾಸ್ ಕಟರ್ ಬಳಸಿ ಯಂತ್ರದ ಕ್ಯಾಸೆಟ್‌ಗೆ ಹಾನಿ ಮಾಡಿ ಹಣ ತೆಗೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಣ ದೋಚಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುಳ್ಳ ಗ್ರಾಮದ ಎಟಿಎಂನಲ್ಲಿ ಸುಮಾರು 11 ಲಕ್ಷ ರೂಪಾಯಿ, ಬ್ಯಾಹಟ್ಟಿ ಎಟಿಎಂನಲ್ಲಿ ಸುಮಾರು 3 ಲಕ್ಷ ರೂಪಾಯಿ ಹಣ ಕಳುವಾಗಿರುವ ಮಾಹಿತಿ ಲಭ್ಯವಾಗಿದೆ. ಎರಡು ಎಟಿಎಂಗಳಿಂದ ಒಟ್ಟು ಸುಮಾರು 14 ಲಕ್ಷ ರೂಪಾಯಿ ಹಣ ನಾಪತ್ತೆಯಾಗಿದೆ.

ಕಳ್ಳತನದ ಬಳಿಕ ಸಿಸಿಟಿವಿ ಕ್ಯಾಮೆರಾಗಳಿಗೂ ಹಾನಿ ಮಾಡಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳದಲ್ಲಿ ಸಿಕ್ಕಿರುವ ಸುಳಿವುಗಳ ಆಧಾರದಲ್ಲಿ ಪೊಲೀಸರು ಶಂಕಿತರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಆತಂಕಕಾರಿ ಸಂಗತಿ ಅಂದ್ರೆ, ಸುಳ್ಳ ಗ್ರಾಮದ ಎಟಿಎಂ ನಡು ಊರಿನಲ್ಲೇ ಇದೆ. ಜನ ಸಂಚಾರವಿರುವ ಪ್ರದೇಶದಲ್ಲೇ ಎಟಿಎಂಗೆ ಕನ್ನ ಹಾಕಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಎರಡು ಎಟಿಎಂಗಳಲ್ಲಿ ನಡೆದಿರುವ ಕಳ್ಳತನದ ಹಿಂದೆ ಒಂದೇ ತಂಡ ಇದೆಯಾ ಎಂಬುದೂ ತನಿಖೆಯ ಪ್ರಮುಖ ಅಂಶವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ವಿನೋದ್ ಮುಕ್ತೆದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಎಟಿಎಂಗಳ ಕಳ್ಳತನ ಪ್ರಕರಣ ದಾಖಲಿಸಿಕೊಂಡು, ಶಂಕಿತರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author