Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಬಟಾಣಿ, 2ರಿಂದ 3 ಆಲೂಗಡ್ಡೆ, 1 ಬೀಟ್ರೂಟ್ ತುರಿ, ಗರಂ ಮಸಾಲೆ, ಖಾರದ ಪುಡಿ, ಜಿಂಜರ್ ಗಾರ್ಲಿಪ್ ಪೇಸ್ಟ್, ಉಪ್ಪು, ಸ್ವಲ್ಪ ಸಕ್ಕರೆ, ಅರಿಶಿನ, 1 ಬೌಲ್ ಸಕ್ಕರೆ ಬೆರೆಸಿ ಫ್ರಿಜ್ನಲ್ಲಿರಿಸಿದ ಮೊಸರು, ಅರ್ಧ ಕಪ್ ಎಣ್ಣೆ, ಕ್ಯಾರೆಟ್ ತುರಿ, ದಾಳಿಂಬೆ ಕಾಳು, ಗ್ರೀನ್ ಚಟ್ನಿ, ಹುಣಸೆ ಚಟ್ನಿ, ಸೇವು, ಖಾರಾ ಬೂಂದಿ, 1 ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಕಪ್ ಬ್ರೆಡ್ ಕ್ರಂಬ್ಸ್ ಅಥವಾ ರವಾ.
ಮಾಡುವ ವಿಧಾನ: ಬಟಾಣಿ, ಆಲೂಗಡ್ಡೆ ಬೇಯಿಸಿ, ಬೀಟ್ರೂಟ್ ತುರಿದು, ಇವೆರಡನ್ನು ಮಿಕ್ಸಿಂಗ್ ಬೌಲ್ಗೆ ಹಾಕಿ, ಜತೆಗೆ ಗರಂ ಮಸಾಲೆ, ಖಾರದ ಪುಡಿ, ಜಿಂಜರ್ ಗಾರ್ಲಿಪ್ ಪೇಸ್ಟ್, ಉಪ್ಪು, ಸ್ವಲ್ಪ ಸಕ್ಕರೆ, ಅರಿಶಿನ ಹಾಕಿ ಮಿಕ್ಸ್ ಮಾಡಿ, ಟಿಕ್ಕಿ ತಯಾರಿಸಿ. ಸಣ್ಣ ಬೌಲ್ನಲ್ಲಿ ಕಾರ್ನ್ಫ್ಲೋರ್ ಮತ್ತು ಸ್ವಲ್ಪ ನೀರು ಹಾಕಿ ತೆಳ್ಳದಿನ ಪೇಸ್ಟ್ ತಯಾರಿಸಿ.
ಪ್ಯಾನ್ ಬಿಸಿ ಮಾಡಿ, ಅದರ ಮೇಲೆ ಎಣ್ಮೆ ಹಾಕಿ , ನಂತರ ರೆಡಿ ಮಾಡಿದ ಟಿಕ್ಕಿಯನ್ನು ಕಾರ್ನ್ ಫ್ಲೋರ್ ಪೇಸ್ಟ್ಗೆ ಹಾಕಿ, ಬ್ರೆಡ್ ಕ್ರಂಬ್ಸ್ನಲ್ಲಿ ಅದ್ದಿ, ತವ್ವಾ ಮೇಲೆ ಹಾಕಿ ತವ್ವಾ ಫ್ರೈ ಮಾಡಿ.
ನಂತರ ಸಣ್ಣ ಪ್ಲೇಟ್ ಅಥವಾ ಬೌಲ್ಗೆ ಈ ಟಿಕ್ಕಿ ಹಾಕಿ, ಇದರ ಮೇಲೆ ಕೋಲ್ಡ್ ಆಗಿರುವ ಕರ್ಡ್, , ಕ್ಯಾರೆಟ್ ತುರಿ, ದಾಳಿಂಬೆ ಕಾಳು, ಗ್ರೀನ್ ಚಟ್ನಿ, ಹುಣಸೆ ಚಟ್ನಿ, ಸೇವು, ಖಾರಾ ಬೂಂದಿ, ಸಣ್ಣಗೆ ಹೆಚ್ಚಿನ ಈರುಳ್ಳಿ ಹಾಕಿ ಸರ್ವ್ ಮಾಡಿ.




