Recipe: ಬೇಕಾಗುವ ಸಾಮಗ್ರಿ: 3ರಿಂದ 4 ಟೋಮ್ಯಾಟೋ, 2 ಹಸಿಮೆಣಸು, 1 ಸ್ಪೂನ್ ಜೀರಿಗೆ, 5ರಿಂದ 8 ಎಸಳು ಬೆಳ್ಳುಳ್ಳಿ, 1 ಈರುಳ್ಳಿ, 4 ಸ್ಪೂನ್ ಎಣ್ಣೆ, ಸ್ವಲ್ಪ ಉದ್ದಿನಬೇಳೆ, ಕೊತ್ತೊಂಬರಿ ಸೊಪ್ಪು, ನಾಾಲ್ಕು ಕರಿಬೇವು, ಉಪ್ಪು.
ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಪ್ಯಾನ್ ಬಿಸಿಯಾದ ಬಳಿಕ 2 ಸ್ಪೂನ್ ಎಣ್ಣೆ ಹಾಕಿ. ಬಳಿಕ ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಹುರಿಯಿರಿ.
ನಂತರ ಈರುಳ್ಳಿ ಹಾಕಿ ಬಾಡಿಸಿ. ಬಳಿಕ ಟೋಮ್ಯಾಟೋ ಹಾಕಿ ಹುರಿಯಿರಿ. ಸ್ವಲ್ಪ ಬೆಲ್ಲ, ಬೇಕಾದರೆ, ಖಾರದ ಪುಡಿ ಹಾಕಿ, ನಂತರ ಉಪ್ಪು, ಕೊತ್ತೊಂಬರಿ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಗ್ಯಾಸ್ ಆಫ್ ಮಾಡಿ, ಮಿಶ್ರಣ ಆರಲು ಬಿಡಿ.
ಮಿಶ್ರಣ ತಣ್ಣಗಾದ ಬಳಿಕ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿ. ಈ ರುಬ್ಬಿದ ಮಿಶ್ರಣವನ್ನು ಮತ್ತೆ ಎಣ್ಣೆ ಹಾಕಿ, ಸ್ವಲ್ಪ ಬೇಯಿಸಿದ್ರೆ ಟೋಮ್ಯಾಟೋ ಚಟ್ನಿ ರೆಡಿ. ನೀವು ಇದಕ್ಕೆ ಬೇಕಾದ್ರೆ, ಒಗ್ಗರಣೆ ಹಾಕಬಹುದು. ಅವಶ್ಯಕತೆ ಇದ್ದಲ್ಲಿ , ಶುಂಠಿ ಬಳಸಬಹುದು.
ಇಡ್ಲಿ, ದೋಸೆ, ಚಪಾತಿ, ಅನ್ನದ ಜತೆಗೆ ಈ ಚಟ್ನಿ ಮತ್ತು ಎಣ್ಣೆ ಅಥವಾ ತುಪ್ಪ ಹಾಕಿ ಸವಿಯಬಹುದು.




