Political News: ಕುಡ್ಲದ ಗಾಂಧಿ ಸ್ಕ್ವೇರ್‌ನಲ್ಲಿ ಮಂಗಳೂರು ಶೈಲಿ ಉಪಹಾರ ಸವಿದ ಸಿಎಂ ಡಿ.ಕೆ.ಶಿವಕುಮಾರ್

Political News: ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದು, ನಿನ್ನೆ ಸಂಜೆ ವೇಳೆಗೆ ನಗರಕ್ಕೆ ಬಂದಿಳಿದಿದ್ದಾರೆ. ಬಂದ ಬಳಿಕ ಇಲ್ಲಿ ರಾಜಕೀಯ ನಾಯಕರ ಜತೆ ಸಭೆ ನಡೆಸಿ, ಕಡಲ ಕಿನಾರೆ ಬಳಿ, ಡಿನ್ನರ್ ಕೂಡ ಮಾಡಿದ್ದಾರೆ.

ಇಂದು ಬೆಳಿಗ್ಗೆ ಮಂಗಳೂರಿನ ಕಂಟೆಂಟ್ ಕ್ರಿಯೇಟರ್ಸ್ ಭೇಟಿ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್, ಅವರ ಜತೆ ಮಂಗಳೂರಿನ ಗಾಂಧಿ ಸ್ಕ್ವೇರ್‌ ಕೆಫೆಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ್ದಾರೆ. ಅಲ್ಲದೇ, ಕಂಟೆಂಟ್ ಕ್ರಿಯೇಟರ್ಸ್ ಜತೆ ಸಣ್ಣ ಮಾತುಕತೆ ನಡೆಸಿ, ಫೋಟೋಶೂಟ್ ಕೂಡ ನಡೆದಿದೆ.

ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಡಿ.ಕೆ.ಶಿವಕುಮಾರ್, ಗಾಂಧೀಜಿ 1934ರಲ್ಲಿ ಮಂಗಳೂರಿಗೆ ಬಂದ ಸವಿ ನೆನಪಿಗಾಗಿ ಈ ರೆಸ್ಟೋರೆಂಟ್‌ಗೆ ಗಾಂಧಿ ಸ್ಕೈರ್ ಎಂದು ಹೆಸರಿಡಲಾಗಿದೆ ಎಂದು ಬರೆದಿದ್ದಾರೆ.

ಗಾಂಧಿ ಸ್ಕ್ವೈರ್‌ನಲ್ಲಿ ಸಿಎಂ ಬನ್ಸ್, ಸೇಮೆ-ಕಾಯಿಹಾಲು, ಸುರ್ನಳಿ-ಚಟ್ನಿ, ಗೋಳಿ ಬಜೆ ಸವಿದಿದ್ದಾರೆ. ಅಲ್ಲದೇ,  ಸಿಎಂ ಬಂದ ಸವಿನೆನಪಿಗಾಗಿ ಇಲ್ಲಿ ಬಳಸುವ ಕಪ್ ಮೇಲೆ ತಮ್ಮ ಆಟೋಗ್ರಾಫ್ ಕೂಡ ಹಾಕಿದ್ದಾರೆ.

About The Author