Kitchen Tips: ನೀವು ವಾರಪೂರ್ತಿ ಕೆನೆ ಮತ್ತು ಮೊಸರು ಕೂಡಿಡುತ್ತೀರಿ. ಬಳಿದ ಅದನ್ನು ಕಡಿದು ಬೆಣ್ಣೆ ಮತ್ತು ಮಜ್ಜಿಗೆ ಮಾಡಲು ತಯಾರಾಗುತ್ತೀರಿ. ಆದರೆ ಕೆಲವು ಬಾರಿ ಬೆಣ್ಣೆ ಬರುವುದೇ ಇಲ್ಲ. ಮಜ್ಜಿಗೆ ಬೆಣ್ಣೆ ಮಿಕ್ಸ್ ಆಗಿ ಕ್ರೀಮ್ ಬರುತ್ತದೆ. ಈ ವೇಳೆ ಏನು ಮಾಡಬೇಕೆಂದು ತೋಚುವುದಿಲ್ಲ. ಅಂಥ ಸಮಯದಲ್ಲಿ ನಾವೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ನೀವು ಕೂಡಿರಿಸಿದ ಕೆನೆ ಮತ್ತು ಮೊಸರನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮಿಕ್ಸಿ ಜಾರ್ಗೆ ಹಾಕಿ ಇದರ ಜತೆಗೆ ಸ್ವಲ್ಪ ನೀರು ಮತ್ತು ಐಸ್ ಹಾಕಿ ಗ್ರೈಂಡ್ ಮಾಡಿ. ಹೀಗೆ ಮಾಡಿದಾಗ ಬೆಣ್ಣೆ ಬರುತ್ತದೆ. ಆದರೆ ಹೀಗೆ ಮಾಡಿದಾಗಲೂ ಬೆಣ್ಣೆ ಬಂದಿಲ್ಲವೆಂದಲ್ಲಿ, ಬೇರೆ ಉಪಾಯ ಅನುಸರಿಸಬೇಕು.
ಬಾಟಲ್ಲಿಯಲ್ಲಿ ಹೀಗೆ ಮಜ್ಜಿಗೆ ಬೆಣ್ಣೆ ಮಿಕ್ಸ್ ಆಗಿರುವ ಕ್ರೀಮ್ ಹಾಕಿ ಚೆನ್ನಾಗಿ ಶೇಕ್ ಮಾಡಿ. ಆಗ ಖಂಡಿತವಾಗಿಯೂ ಬೆಣ್ಣೆ ಬರುತ್ತದೆ. ಮಜ್ಜಿಗೆ ಮತ್ತು ಬೆಣ್ಣೆ ಬೇರೆ ಬೇರೆಯಾಗಿ ಬರುತ್ತದೆ. ಉತ್ತಮ ಫಲಿತಾಂಶ ಸಿಗುತ್ತದೆ. ಅಥವಾ ನಿಮ್ಮ ಮನೆಯಲ್ಲಿ ಕುಡುಗೋಲಿದ್ದರೆ, ಅದನ್ನು ಬಳಸಿ ನೀವು ಬೆಣ್ಣೆ ಕಡಿಯಬಹುದು.




