Dharwad News: ಧಾರವಾಡ ಕೃಷಿ ಮೇಳಕ್ಕೆ ಎರಡನೇ ದಿನವೂ ಭರ್ಜರಿ ರೆಸ್ಪಾನ್ಸ್

Dharwad News: ರೈತರ ಜಾತ್ರೆ ಎಂದೇ ಖ್ಯಾತಿಯಾಗಿರುವ ಧಾರವಾಡ ಕೃಷಿ ಮೇಳಕ್ಕೆ ಎರಡನೇ ದಿನವೇ ಜನಸಾಗರವೇ ಹರಿದುಬಂದಿದೆ. ನಿನ್ನೆ ಮೂರು ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದು, ಇಂದು ಸುಮಾರು ಒಂಬತ್ತು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕೃಷಿ ತಂತ್ರಜ್ಞಾನದಿಂದ ಹಿಡಿದು ಜಾನುವಾರು, ಕೀಟ, ಫಲ–ಪುಷ್ಪ ಪ್ರದರ್ಶನದವರೆಗೆ ಮೇಳದ ವೈವಿಧ್ಯಮಯ ವಿಭಾಗಗಳು ಜನರ ಗಮನ ಸೆಳೆಯುತ್ತಿವೆ.

ನಿನ್ನೆ ಮೂರು ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದು, ಇಂದು ಬರೋಬ್ಬರಿ ಒಂಬತ್ತು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ರೈತರ ಜ್ಞಾನ ಹೆಚ್ಚಿಸುವುದು… ಕೃಷಿಯಲ್ಲಿನ ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದು… ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ನೀಡುವುದು. ಇದೇ ಕೃಷಿ ಮೇಳದ ಪ್ರಮುಖ ಉದ್ದೇಶ.

ಬೀಜ ಮೇಳದಿಂದ ಆರಂಭವಾಗಿ ವಿವಿಧ ಬೆಳೆಗಳ ಹೊಸ ತಳಿಗಳು, ಸಾವಯವ ಕೃಷಿ, ನೈಸರ್ಗಿಕ ಕೃಷಿ ಹಾಗೂ ಕೃಷಿ ಉತ್ಪನ್ನಗಳವರೆಗೆ ರೈತರಿಗೆ ಬೇಕಾದ ಮಾಹಿತಿಯನ್ನು ಒಂದೇ ಕಡೆ ಒದಗಿಸಲಾಗಿದೆ. ಇನ್ನು ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಜಾನುವಾರು ಪ್ರದರ್ಶನವೂ ಒಂದು.

ಜಾನುವಾರುಗಳ ವೈವಿಧ್ಯ ಕಂಡು ರೈತರು ಕುತೂಹಲದಿಂದ ಮಾಹಿತಿ ಪಡೆಯುತ್ತಿದ್ದಾರೆ. ಮೇಳದಲ್ಲಿ ದೊರೆತ ಮಾಹಿತಿ ಹಾಗೂ ಹೊಸ ತಂತ್ರಜ್ಞಾನಗಳ ಕುರಿತು ರೈತರ ಅಭಿಪ್ರಾಯ. ಜಾನುವಾರುಗಳಷ್ಟೇ ಅಲ್ಲ… ಕೀಟಗಳ ಪ್ರಪಂಚವೂ ಇಲ್ಲಿ ಗಮನ ಸೆಳೆಯುತ್ತಿದೆ ಕೃಷಿಗೆ ಉಪಯುಕ್ತ ಕೀಟಗಳು ಯಾವವು..? ಹಾನಿಕಾರಕ ಕೀಟಗಳಿಂದ ಬೆಳೆ ರಕ್ಷಣೆ ಹೇಗೆ..? ಕೀಟಗಳ ಜೀವನಕ್ರಮ, ಬೆಳೆಗಳ ಮೇಲಿನ ಪರಿಣಾಮ ಹಾಗೂ ನಿಯಂತ್ರಣ ವಿಧಾನಗಳನ್ನು ಪ್ರದರ್ಶನದ ಮೂಲಕ ತಿಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಜನರು ಕೀಟ ಪ್ರದರ್ಶನದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಫಲ–ಪುಷ್ಪ ಪ್ರದರ್ಶನವೂ ಮೇಳಕ್ಕೆ ಮತ್ತಷ್ಟು ಮೆರುಗು ತಂದಿದೆ. ವಿವಿಧ ಬಗೆಯ ಹಣ್ಣು, ತರಕಾರಿ, ಹೂವು ಹಾಗೂ ಕೃಷಿ ಉತ್ಪನ್ನಗಳ ಆಕರ್ಷಕ ಪ್ರದರ್ಶನ. ಹೊಸ ತಳಿಗಳು ಹಾಗೂ ಉತ್ಪಾದನಾ ವಿಧಾನಗಳ ಬಗ್ಗೆ ರೈತರಿಗೆ ಮಾಹಿತಿ… ಮಹಿಳಾ ರೈತರ ಉತ್ಪನ್ನಗಳು ಹಾಗೂ ರೈತ ಆವಿಷ್ಕಾರಗಳಿಗೂ ಮೇಳದಲ್ಲಿ ವಿಶೇಷ ಗಮನ ನೀಡಲಾಗಿದೆ.

ಕೃಷಿ ಈಗ ಸಾಂಪ್ರದಾಯಿಕ ಪದ್ಧತಿಗೆ ಸೀಮಿತವಾಗಿಲ್ಲ… ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕುತ್ತಿರುವ ಕೃಷಿ ಕ್ಷೇತ್ರ… ಸ್ಮಾರ್ಟ್ ಫಾರ್ಮಿಂಗ್, ಆಧುನಿಕ ಕೃಷಿ ಯಂತ್ರೋಪಕರಣ, ಡ್ರೋನ್ ಬಳಕೆ, ನಿಖರ ಕೃಷಿ ಹಾಗೂ ಆಧುನಿಕ ನೀರಾವರಿ ಪದ್ಧತಿಗಳ ಪರಿಚಯವೂ ಮೇಳದಲ್ಲಿದೆ.

ಕಡಿಮೆ ನೀರು… ಕಡಿಮೆ ವೆಚ್ಚ… ಕಡಿಮೆ ಸಮಯದಲ್ಲಿ ಹೆಚ್ಚು ಉತ್ಪಾದನೆ… ಹೊಸ ತಂತ್ರಜ್ಞಾನದ ಮೂಲಕ ಕೃಷಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಮಾಹಿತಿಯನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ.

ಒಂದೆಡೆ ರೈತರ ಜ್ಞಾನ ವೃದ್ಧಿ. ಮತ್ತೊಂದೆಡೆ ಕೃಷಿಯ ಹೊಸ ತಂತ್ರಜ್ಞಾನಗಳ ಪರಿಚಯ.ಜಾನುವಾರು, ಕೀಟ, ಫಲ–ಪುಷ್ಪ ಪ್ರದರ್ಶನದಿಂದ ಹಿಡಿದು ಬೀಜ, ಯಂತ್ರೋಪಕರಣ ಹಾಗೂ ರೈತ ಆವಿಷ್ಕಾರಗಳವರೆಗೆ. ಕೃಷಿಯ ಹಲವು ಆಯಾಮಗಳು ಒಂದೇ ವೇದಿಕೆಯಲ್ಲಿ ಅನಾವರಣಗೊಂಡಿವೆ.

ನಿನ್ನೆ ಮೂರು ಲಕ್ಷ ಜನರನ್ನು ಸೆಳೆದಿದ್ದ ಕೃಷಿ ಮೇಳಕ್ಕೆ ಇಂದು ಒಂಬತ್ತು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಧಾರವಾಡ ಕೃಷಿ ಮೇಳ ರೈತರ ಜಾತ್ರೆಯ ಜೊತೆಗೆ ಕೃಷಿಯ ಜ್ಞಾನ, ತಂತ್ರಜ್ಞಾನ ಮತ್ತು ಹೊಸ ಸಾಧ್ಯತೆಗಳ ಬೃಹತ್ ವೇದಿಕೆಯಾಗಿ ಗಮನ ಸೆಳೆಯುತ್ತಿದೆ.

ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಧಾರವಾಡ

About The Author