ಡಿಜೆ ಸೌಂಡ್‌ ಎಫೆಕ್ಟ್‌ಗೆ ಹಾರಿಹೋಯಿತೇ ಪ್ರಾಣಪಕ್ಷಿ..?: ಶಾಲೆಯಲ್ಲೇ ಕುಳಿತಿದ 2ನೇ ತರಗತಿ ಬಾಲಕಿ ಸಾ*ವು

Lucknow: ಖುಷಿ ಖುಷಿಯಾಗಿ ಡಾನ್ಸ್ ಮಾಡುತ್ತ ಇದ್ದ ಮಗು ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿತು ಎಂದರೆ, ಯಾರಿಗೆ ತಾನೇ ನಂಬಲು ಸಾಧ್ಯ..? ಆದರೆ ಇಂಥದ್ದೇ ದುರ್ಘಟನೆ ಲಖನೌನಲ್ಲಿ ನಡೆದಿದೆ.

ಉತ್ತರಪ್ರದೇಶದ ಬಲರಾಮ್ ಪುರದಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ, ಡಿಜೆ ಸೌಂಡ್ ಹಾಕಿ ಮೆರವಣಿಗೆ ಹೋಗುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಈಕೆ ಶಾಲೆಯಲ್ಲಿ ಕುಳಿತಿದ್ದಾಗ, ಶಾಲೆಯ ಮುಂದಿನಿಂದಲೇ ಡಿಜೆ ಸೌಂಡ್ ಹಾಕಿ ಮೆರವಣಿಗೆ ಸಾಗಿತ್ತು. ಆದರೆ ಆಗ ಆಕೆ ಸ್ನೇಹಿತರ ಜಗಳ ನೋಡಿ ನಗುತ್ತ ಕುಳಿತಿದ್ದಳು. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ ಅದಾಗ 2 ನಿಮಿಷಕ್ಕೆ ಆಕೆ ಕುಳಿತಲ್ಲೇ ಕುಸಿದಿದ್ದಾಳೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ನೀಡಿ, ಬದುಕಿಸಲು ಪ್ರಯತ್ನಿಸಿದರೂ, ಆಕೆ ಸಾವನ್ನಪ್ಪಿದ್ದಾಳೆ.

ಬಾಲಕಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ಈಕೆಗೆ ಅದಾಗಲೇ 2 ಬಾರಿ ಹೃದಯಾಘಾತವಾಗಿತ್ತು ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಡಿಜೆ ಸೌಂಡಿಗೆ ಆಕೆಯ ಸಾವಾಗಿದ್ದಾ ಅಥವಾ ಆಕೆಯ ಹೃದಯ ಸಮಸ್ಯೆಯಿಂದ ಸಾವಾಗಿದ್ದಾ ಅನ್ನುವುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಬೇಕಿದೆ.

About The Author