Sandalwood: ನೀವು ಉತ್ತರಕರ್ನಾಟಕದ ಕಲಬುರಗಿ ಭಾಗದವರಾಗಿದ್ದು, ನಿಮಗೆ ಸಿನಿಮಾದಲ್ಲಿ ನಟಿಸುವ ಆಸೆ ಇದೆಯಾ..? ಹಾಗಾದ್ರೆ ನಿಮಗೆ ಇಲ್ಲಿ 1 ಅವಕಾಶವಿದೆ.
ನಟ, ನಿರ್ದೇಶಕರಾಗಿರುವ ರಿಷಬ್ ಶೆಟ್ಟರ್ ಟೀಂ ನಿಮ್ಮಂಥವರನ್ನು ಹುಡುಕಿ ರಾಜ್ಯ ಪ್ರವಾಸಕ್ಕೆ ಸಿದ್ಧವಾಗಿದೆ. ಕಲಬುರಗಿಯಲ್ಲಿ ಆಡೀಶನ್ ನಡೆಯಲಿದ್ದು, ನೀವು ಈ ಆಡಿಶನ್ನಲ್ಲಿ ಭಾಗಿಯಾಗಿ ನಿಮ್ಮ ಟ್ಯಾಲೆಂಟ್ ಪ್ರದರ್ಶನ ಮಾಡಬಹುದು.
ರಿಷಬ್ ಶೆಟ್ಟಿ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿದ್ದು, ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಪ್ರತ್ಯೇಕ ಅವಕಾಶ. ಕಲಬುರಗಿಯಲ್ಲಿ ಆಡಿಷನ್ ಆಯೋಜಿಸುತ್ತಿದ್ದೇವೆ. ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಭೆಗಳಿಗಾಗಿ ಅಕ್ಟೋಬರ್ 02ರಂದು ವಿಜಯ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ. ನಿಮಗೆ ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಈ ಸುಂದರ ಪ್ರಯಾಣದ ಭಾಗವಾಗಿ! ಎಂದು ಹೇಳಿದ್ದಾರೆ.
ಹಾಗಾಗಿ ನಿಮ್ಮಲ್ಲೂ ಟ್ಯಾಲೆಂಟ್ ಇದ್ದರೆ, ಈ ಆಡಿಶನ್ನಲ್ಲಿ ಭಾಗವಹಿಸಿ, ಅವಕಾಶ ಸದುಪಯೋಗಪಡಿಸಿಕ“ಳ್ಳಿ.
ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಪ್ರತ್ಯೇಕ ಅವಕಾಶ. ಕಲಬುರಗಿಯಲ್ಲಿ ಆಡಿಷನ್ ಆಯೋಜಿಸುತ್ತಿದ್ದೇವೆ. 🎬✨
ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಭೆಗಳಿಗಾಗಿ ಅಕ್ಟೋಬರ್ 02ರಂದು ವಿಜಯ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.
ನಿಮಗೆ ಅನುಕೂಲವಾಗುವ ಸ್ಥಳವನ್ನು… pic.twitter.com/73kT2xWjR5
— Rishab Shetty (@shetty_rishab) September 26, 2026




